Kollamogru Archives - Sullia Samagra Samachara https://sullia.samagrasamachara.com/category/sullia/kollamogru/ Samagra Media Network Mon, 03 Aug 2026 04:37:13 +0000 en-US hourly 1 https://wordpress.org/?v=7.1.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Kollamogru Archives - Sullia Samagra Samachara https://sullia.samagrasamachara.com/category/sullia/kollamogru/ 32 32 235500897 ಕೊಲ್ಲಮೊಗ್ರು : ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ವತಿಯಿಂದ ಜು.25ರಂದು ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ  ಹಾಗೂ ಶಾಲಾ ವಠಾರ ಸ್ವಚ್ಚತಾ ಕಾರ್ಯಕ್ರಮ  https://sullia.samagrasamachara.com/2026/08/03/news-one-320/ Mon, 03 Aug 2026 04:37:13 +0000 https://sullia.samagrasamachara.com/?p=71986 The post ಕೊಲ್ಲಮೊಗ್ರು : ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ವತಿಯಿಂದ ಜು.25ರಂದು ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ  ಹಾಗೂ ಶಾಲಾ ವಠಾರ ಸ್ವಚ್ಚತಾ ಕಾರ್ಯಕ್ರಮ  appeared first on Sullia Samagra Samachara.

]]>
ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ ಹಾಗೂ ಶಾಲಾ ಸುತ್ತಲಿನ ಪರಿಸರದ ಸ್ವಚ್ಛತಾ ಕಾರ್ಯವನ್ನು ಕೊಲ್ಲಮೊಗ್ರು ಚೈತನ್ಯ ಯುವತಿ ಮಂಡಲದ ವತಿಯಿಂದ ಜು.25 ರಂದು ನಡೆಸಲಾಯಿತು.

ಮಂಡಲದ ಪದಾಧಿಕಾರಿಗಳಾದ ಶ್ರೀಮತಿ ನೀಲಾವತಿ ತಂಬಿನಡ್ಕ, ಶ್ರೀಮತಿ ರೀತಾ ಪಡಿಕಲ್ಲು, ಶ್ರೀಮತಿ ಸುನಂದ ಗಡಿಕಲ್ಲು, ಶ್ರೀಮತಿ ತಾರಾ ಕಲ್ಕೂದಿ, ಶ್ರೀಮತಿ ಲತಾ ಕುಮಾರಿ ತಂಬಿನಡ್ಕ ನೇತೃತ್ವದಲ್ಲಿ ನಡೆಯಿತು.

ಮಳೆಯ ಕಾರಣ ಶಾಲೆಗೆ ರಜೆಯಿದ್ದರೂ ಉಪಹಾರ ವ್ಯವಸ್ಥೆಗೆ ಅಕ್ಷರ ದಾಸೋಹ ಸಿಬ್ಬಂದಿಯಾದ ಶ್ರೀಮತಿ ದಿವ್ಯಾಕುಮಾರಿ ಸಹಕರಿಸಿದರು 

ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಕೆ.ಪಿ, ಸಹಶಿಕ್ಷಕರಾಗಿರುವ, ಲೋಕನಾಥ, ರಾಜೇಶ್, ಚಂದ್ರು  ಇವರುಗಳು ಉಪಸ್ಥಿತರಿದ್ದರು.

The post ಕೊಲ್ಲಮೊಗ್ರು : ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ವತಿಯಿಂದ ಜು.25ರಂದು ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ  ಹಾಗೂ ಶಾಲಾ ವಠಾರ ಸ್ವಚ್ಚತಾ ಕಾರ್ಯಕ್ರಮ  appeared first on Sullia Samagra Samachara.

]]>
71986
ಕೊಲ್ಲಮೊಗ್ರು: 6 ತಿಂಗಳಿನಿಂದ ಪಾವತಿಯಾಗದ ವೇತನ| ವೈದ್ಯಾಧಿಕಾರಿ ಕರ್ತವ್ಯಕ್ಕೆ ರಾಜೀನಾಮೆ https://sullia.samagrasamachara.com/2025/12/23/doctor-resigned-his-duty-lack-af-salary/ Tue, 23 Dec 2025 04:46:58 +0000 https://sullia.samagrasamachara.com/?p=71737 The post ಕೊಲ್ಲಮೊಗ್ರು: 6 ತಿಂಗಳಿನಿಂದ ಪಾವತಿಯಾಗದ ವೇತನ| ವೈದ್ಯಾಧಿಕಾರಿ ಕರ್ತವ್ಯಕ್ಕೆ ರಾಜೀನಾಮೆ appeared first on Sullia Samagra Samachara.

]]>
ಗುತ್ತಿಗಾರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಸರಿಯಾಗಿ ಸಂಬಳ ಆಗದ ಕಾರಣ ರಾಜಿನಾಮೆ ನೀಡಿದ್ದಾರೆ. 6 ತಿಂಗಳಿಂದ ಸಂಬಳ ಬರದಿದ್ದಕ್ಕೆ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ವೈದ್ಯರಾದ ಡಾ.ಕುಲದೀಪ್ ಎಂ.ಡಿ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷದಿಂದ ವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಸಂಬಳ ಬಾರದೇ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ. ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ರಾಜ್ಯದ ಹಲವು ಪ್ರಾಥಮಿಕ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಸರ್ಕಾರ ಸಂಬಳ ಬಾಕಿ ಉಳಿಸಿಕೊಂಡಿದೆ. ಇನ್ನೂ ನೌಕರರ ಸಂಬಳದ ವಿಳಂಬದ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ಎಚ್ಚರಿಸುತ್ತಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಡಾ. ಕುಲದೀಪ್ ಅವರ ಪ್ರಕರಣ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವೃತ್ತಿಪರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸಿದೆ.

The post ಕೊಲ್ಲಮೊಗ್ರು: 6 ತಿಂಗಳಿನಿಂದ ಪಾವತಿಯಾಗದ ವೇತನ| ವೈದ್ಯಾಧಿಕಾರಿ ಕರ್ತವ್ಯಕ್ಕೆ ರಾಜೀನಾಮೆ appeared first on Sullia Samagra Samachara.

]]>
71737
ನಡುಗಲ್ಲು: ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ https://sullia.samagrasamachara.com/2024/11/16/childrens-day-celebration/ Sat, 16 Nov 2024 02:25:29 +0000 https://sullia.samagrasamachara.com/?p=70420 The post ನಡುಗಲ್ಲು: ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ appeared first on Sullia Samagra Samachara.

]]>
ನಡುಗಲ್ಲು ನ.14: ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.  ಪೂರ್ವಾಹ್ನದ ಅವಧಿಯಲ್ಲಿ  ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ  ಸಭಾಧ್ಯಕ್ಷತೆಯನ್ನು  ಶಾಲಾ ‘ಎಸ್ ಡಿಎಂಸಿ ಅಧ್ಯಕ್ಷ  ಶಿವರಾಮ ಉತ್ರಂಬೆ ವಹಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ, ಭಾಷಣದ ಬಳಿಕ ಹೊಂಬೆಳಕು ತಂಡದ  ಗೌರವಾಧ್ಯಕ್ಷ ಉದಯಕುಮಾರ್ ದೇರಪಜ್ಜನ ಮನೆ ಮಾತನಾಡಿ ಶಾಲೆ ಬೆಳೆದು ಬಂದ ದಾರಿ,  ತಮ್ಮ ಮನೆತನದವರು ನೀಡಿದ ಕೊಡುಗೆ ಬಗ್ಗೆ ಸ್ಮರಿಸಿದರು.

ನಾಲ್ಕೂರ್ ಹೊಂಬೆಳಕು ಬಳಗ  ವತಿಯಿಂದ  ‘ಸ್ವಚ್ಛ ಪರಿಸರ ‘ ವಿಷಯವಾಗಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ  ಚಿತ್ರ ಬರೆಯುವ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ‘ ಪ್ರಬಂಧ ಸ್ಪರ್ಧೆ ‘ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ತರಗತಿ ವಾರು  ಪ್ರಥಮ, ದ್ವಿತೀಯ, ತೃತೀಯ  ಬಂದವರಿಗೆ, ₹100, 75, 50 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರದ ಕೊಡುಗೆಯನ್ನು ಹೊಂಬೆಳಕು ತಂಡದ  ಸದಸ್ಯರು ನೀಡಿದರು. ಶಾಲಾವತಿಯಿಂದ  1ರಿಂದ 7ನೇ ತರಗತಿ ವರೆಗೆ ನಿಂಬೆ ಚಮಚ ಓಟ, ಲಕ್ಕಿ ಗೇಮ್,  ಗ್ಲಾಸಿಗೆ ನೀರು ತುಂಬಿಸುವುದು  ಸ್ಪರ್ಧೆಗಳನ್ನು ಏರ್ಪಡಿಸಿ ತರಗತಿ ವಾರು  ಪ್ರಥಮ ದ್ವಿತೀಯ ತೃತೀಯ ಬಂದವರಿಗೆ  ಪುಸ್ತಕವನ್ನು  ಬಹುಮಾನ ರೂಪವಾಗಿ  ನೀಡಲಾಯಿತು.  

ಶಿಕ್ಷಕ ಮಹೇಶ್ ಕೆ.ಕೆ. ಇವರು ಸ್ವತಂತ್ರ ಭಾರತದ  ಮೊದಲ ಪ್ರಧಾನಿ  ಪಂಡಿತ್ ಜವಾಹರ ಲಾಲ್ ನೆಹರುರವರ ಜೀವನ ಚರಿತ್ರೆ, ಅವರು ನಡೆದು  ಬಂದ ದಾರಿ, ಶಿಕ್ಷಣ, ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರ, ಸಮಾಜಕ್ಕೆ ಅವರು ನೀಡಿರುವ ಕೊಡುಗೆಯ  ಬಗ್ಗೆ ಮಾಹಿತಿ ನೀಡಿದರು. ಶಾಲಾ ಹಿರಿಯ ಶಿಕ್ಷಕಿ ವನಜಾಕ್ಷಿ  ಎಂ. ಇವರು  ಕಾರ್ಯಕ್ರಮ ನಿರ್ವಹಿಸಿ  ನಂದರ್ಬೋಚಿತವಾಗಿ  ದಿನದ ಮಹತ್ವದ ಬಗ್ಗೆ  ಹಾಡು ಹಾಡಿ  ಎಲ್ಲರ ಮನರಂಜಿಸಿದರು. ಅತಿಥಿ ಶಿಕ್ಷಕಿ ಸುಮನ ಹೊಂಬೆಳಕು ಸ್ಪರ್ಧಾ ವಿಜೇತರ  ಪಟ್ಟಿ ವಾಚಿಸಿದರು. ಜ್ಞಾನದೀಪ ಶಿಕ್ಷಕಿ ಸವಿತಾ ಇವರು  ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಹೇಳಿದರು.

ವೇದಿಕೆಯಲ್ಲಿ ‘ಎಸ್ ಡಿಎಮ್ ಸಿ’ ಸದಸ್ಯ ಯುವರಾಜ ತಂಟೆಪ್ಪಾಡಿ, ವನಿತಾ ಬಾಲಕೃಷ್ಣ, ಹೊಂಬೆಳಕು ತಂಡದ  ಸದಸ್ಯ ದಿನೇಶ್ ಹಾಲೆಮಜಲು, ನಿತಿನ್ ದೇರಪ್ಪಜ್ಜನಮನೆ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರಿಪ್ಪಾಡಿ ಸ್ವಾಗತಿಸಿ,  ದಿನದ ವಿಶೇಷತೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರ-ಶಿಕ್ಷಣಾರ್ಥಿ  ಮೋಕ್ಷ ವಂದನೆಗಳನ್ನು ಸಲ್ಲಿಸಿದರು. ಈ ದಿನ ವಿಶೇಷ ಭೋಜನ ನೀಡಲಾಯಿತು. ಮಹೇಶ್ ಕೆ.ಕೆ. ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. 

The post ನಡುಗಲ್ಲು: ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ appeared first on Sullia Samagra Samachara.

]]>
70420
ತಾಲೂಕಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ| ಪತ್ರಿಕಾ ವಿತರಕ, ಛಾಯಾಗ್ರಾಹಕ ದಿವಾಕರ ಮುಂಡಾಜೆ ಇನ್ನಿಲ್ಲ https://sullia.samagrasamachara.com/2024/10/16/heart-attack/ Wed, 16 Oct 2024 03:09:05 +0000 https://sullia.samagrasamachara.com/?p=70227 The post ತಾಲೂಕಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ| ಪತ್ರಿಕಾ ವಿತರಕ, ಛಾಯಾಗ್ರಾಹಕ ದಿವಾಕರ ಮುಂಡಾಜೆ ಇನ್ನಿಲ್ಲ appeared first on Sullia Samagra Samachara.

]]>
ಹರಿಹರ ಪಲ್ಲತಡ್ಕ: ಇಲ್ಲಿ ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕರಾಗಿರುವ ದಿವಾಕರ ಮುಂಡಾಜೆಯವರು ಇಂದು(ಅ16) ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಇದರೊಂದಿಗೆ ಸುಳ್ಯ ತಾಲೂಕಿನಲ್ಲಿ ಹೃದಯಾಘಾತಕ್ಕೆ ಮೂರು ದಿನಗಳಲ್ಲಿ ಮೂರನೇ ಸಾವಾಗಿದೆ.

ದಿವಾಕರ ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ತನ್ನ ಅಂಗಡಿ ತೆರೆಯಲೆಂದು ತನ್ನ ಮನೆಯಿಂದ ಕಾರಲ್ಲಿ ಬರುತ್ತಿದ್ದ ದಿವಾಕರ ಮುಂಡಾಜೆಯವರಿಗೆ ಹರಿಹರ ಪಲ್ಲತಡ್ಕ ಪೇಟೆಯ ಬಳಿ ಹೃದಯಾಘಾತವಾಗಿ ಕಾರು ನಿಲ್ಲಿಸಿದರೆಂದೂ, ತೀವ್ರ ಹೃದಯಾಘಾತವಾಗಿದ್ದುದರಿಂದ ಕಾರಲ್ಲಿ ಕೂತಲ್ಲಿಯೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ವಿಷಯ ತಿಳಿದು ಊರವರು ಸೇರಿ ಡಾ. ಗಿರೀಶ್ ಅವರನ್ನು ಸ್ಥಳಕ್ಕೆ ಕರೆಸಿ ವೈದ್ಯಕೀಯ ತಪಾಸಣೆ ನಡೆಸಿದರು. ಆ ವೇಳೆ ಕೊನೆಯುಸಿರೆಳೆದಿರುವುದು ದೃಢಪಟ್ಟಿದೆ. ದಿವಾಕರರವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಇವರು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

The post ತಾಲೂಕಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ| ಪತ್ರಿಕಾ ವಿತರಕ, ಛಾಯಾಗ್ರಾಹಕ ದಿವಾಕರ ಮುಂಡಾಜೆ ಇನ್ನಿಲ್ಲ appeared first on Sullia Samagra Samachara.

]]>
70227
ಕೊಲ್ಲಮೊಗ್ರು: ಗಡಿಕಲ್ಲು ರಸ್ತೆ ಕುಸಿದ ಜಾಗ ಪರಿಶೀಲಿಸಿದ ಶಾಸಕಿ ಭಾಗೀರಥಿ https://sullia.samagrasamachara.com/2024/09/11/kollamogra/ Wed, 11 Sep 2024 08:37:34 +0000 https://sullia.samagrasamachara.com/?p=69909 The post ಕೊಲ್ಲಮೊಗ್ರು: ಗಡಿಕಲ್ಲು ರಸ್ತೆ ಕುಸಿದ ಜಾಗ ಪರಿಶೀಲಿಸಿದ ಶಾಸಕಿ ಭಾಗೀರಥಿ appeared first on Sullia Samagra Samachara.

]]>
ಕೊಲ್ಲಮೊಗ್ರು: ಇಲ್ಲಿನ ಕೊಲ್ಲಮೊಗ್ರು- ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲು ಎಂಬಲ್ಲಿ ಮಳೆಯಿಂದಾಗಿ ರಸ್ತೆ ಬದಿ ಕುಸಿದಿದ್ದು, ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಡಿಕಲ್ಲು ಎಂಬಲ್ಲಿ ರಸ್ತೆ ಪಕ್ಕ, ಹೊಳೆಯ ಭಾಗದಲ್ಲಿ ಮಣ್ಣು ಕುಸಿದು ರಸ್ತೆ ಅಪಾಯದಲ್ಲಿದ್ದು, ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ಕುಸಿದ ಸ್ಥಳದ ಕೆಳಭಾಗದಿಂದ ತಡೆಗೋಡೆ ನಿರ್ಮಾಣಕ್ಕೆ ಎಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಮಳೆ ಕಡಿಮೆಯಾದ ಕೂಡಲೇ ತುರ್ತು ಪರಿಹಾರ ಕ್ರಮವಾಗಿ ತಾತ್ಕಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಬಳಿಕ ಸರ್ಕಾರದ ಅನುದಾನ ತರಿಸಿ ತಡೆಗೋಡೆ ಕಾಮಗಾರಿ ನಡೆಸಲಾಗುವುದು ಎಂದು ಶಾಸಕಿ ತಿಳಿಸಿದರು.‌

ಕೊಲ್ಲಮೊಗ್ರು ಪೇಟೆಯಲ್ಲಿರುವ ಮುಳುಗು ಸೇತುವೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆಯೂ ಸ್ಥಳೀಯರು ಗಮನ ಸೆಳೆದರು. ಸರ್ವಋತು ಸೇತುವೆ ನಿರ್ಮಾಣದ ಭರವಸೆ ನೀಡಿದರು. ಪನ್ನೆ ಎಂಬಲ್ಲಿ ಕಾಲು ಸಂಕದ ಬೇಡಿಕೆ ಇರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದರು.

ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶ್ವತ್ ಯಳದಾಳು, ಸದಸ್ಯ ಮಾಧವ ಚಾಂತಾಳ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎಸ್.ಎನ್.ಮನ್ಮಥ, ಪ್ರಸಾದ್ ಭಾಗವಹಿಸಿದ್ದರು.

The post ಕೊಲ್ಲಮೊಗ್ರು: ಗಡಿಕಲ್ಲು ರಸ್ತೆ ಕುಸಿದ ಜಾಗ ಪರಿಶೀಲಿಸಿದ ಶಾಸಕಿ ಭಾಗೀರಥಿ appeared first on Sullia Samagra Samachara.

]]>
69909
ಹರಿಹರ ಪಲ್ಲತ್ತಡ್ಕ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ| ಕಲ್ಮಕಾರು ಶಾಲೆಗೆ ಸಮಗ್ರ ಪ್ರಶಸ್ತಿ https://sullia.samagrasamachara.com/2024/09/06/a-fountain-of-talent/ Fri, 06 Sep 2024 03:25:32 +0000 https://sullia.samagrasamachara.com/?p=69854 The post ಹರಿಹರ ಪಲ್ಲತ್ತಡ್ಕ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ| ಕಲ್ಮಕಾರು ಶಾಲೆಗೆ ಸಮಗ್ರ ಪ್ರಶಸ್ತಿ appeared first on Sullia Samagra Samachara.

]]>
ಹರಿಹರ ಪಲ್ಲತಡ್ಕ: ಬಾಳುಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹರಿಹರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಮಕಾರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗದಲ್ಲಿ ಪ್ರಥಮ, ಹಿರಿಯ ವಿಭಾಗದಲ್ಲಿ ದ್ವಿತೀಯ ಹಾಗೂ ಕಿರಿಯ ಮತ್ತು ಹಿರಿಯ ವಿಭಾಗದ ಸಮಗ್ರ ಪ್ರಶಸ್ತಿ ಲಭಿಸಿದೆ.

ಕಿರಿಯರ ವಿಭಾಗದಲ್ಲಿ ಛದ್ಮವೇಷದಲ್ಲಿ ಹಂಸಿಕಾ, ಅಭಿನಯ ಗೀತೆಯಲ್ಲಿ ರಕ್ಷಿತಾ ಎ.ಯು., ಕ್ಲೇ ಮಾಡಲಿಂಗ್‌ನಲ್ಲಿ ಲಕ್ಷಿತಾ ಪ್ರಥಮ, ಭಕ್ತಿಗೀತೆಯಲ್ಲಿ ನಿಖಿತಾ ಡಿ. ತೃತೀಯ, ಧಾರ್ಮಿಕ ಪಠಣದಲ್ಲಿ ಸಂಸ್ಕೃತ ಆರಾಧ್ಯ ಕೆ. ಪ್ರಥಮ, ಚಿತ್ರಕಲೆಯಲ್ಲಿ ಯಶಿಕ ಎಂ.ಕೆ. ತೃತೀಯ, ಆಶುಭಾಷಣದಲ್ಲಿ ಯಶಸ್ ಪಿ.ವೈ. ದ್ವಿತೀಯ ಹಾಗೂ ಕನ್ನಡ ಕಂಠ ಪಾಠದಲ್ಲಿ ಚಿತ್ರಾಕ್ಷಿ ಕೆ.ಡಿ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹಿರಿಯರ ವಿಭಾಗದ ಧಾರ್ಮಿಕ ಪಠಣ ಸಂಸ್ಕೃತ ಮತ್ತು ಕವನ ವಾಚನದಲ್ಲಿ ಕ್ಷಮಾ ಡಿ ಪ್ರಥಮ ಹಾಗೂ ದ್ವಿತೀಯ, ಚಿತ್ರಕಲೆಯಲ್ಲಿ ನಿಶಾ ಎಂಪಿ ದ್ವಿತೀಯ, ಅಭಿನಯ ಗೀತೆ ಮತ್ತು ದೇಶಭಕ್ತಿಗೀತೆಯಲ್ಲಿ ಅನ್ವಿತ ಕೆ.ಎಸ್ ಪ್ರಥಮ ಮತ್ತು ದ್ವಿತೀಯ, ಭಕ್ತಿಗೀತೆಯಲ್ಲಿ ಕೀರ್ತಿ ಪ್ರಥಮ, ಮಿಮಿಕ್ರಿಯಲ್ಲಿ ಚಂಪಕ್ ಕೆ.ಎಂ ಪ್ರಥಮ, ಪ್ರಬಂಧ ರಚನೆಯಲ್ಲಿ ಆರಾಧ್ಯ ಕೆ.ಎಸ್ ತೃತೀಯ , ಹಿಂದಿ ಕಂಠಪಾಠದಲ್ಲಿ ದಿವೀಶ್ ಗೌಡ ಜೆ.ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.

The post ಹರಿಹರ ಪಲ್ಲತ್ತಡ್ಕ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ| ಕಲ್ಮಕಾರು ಶಾಲೆಗೆ ಸಮಗ್ರ ಪ್ರಶಸ್ತಿ appeared first on Sullia Samagra Samachara.

]]>
69854
ಏಕಾಏಕಿ ಸುರಿದ ಧಾರಾಕಾರ ಮಳೆ| ತಾಲೂಕಿನ ಅಲ್ಲಲ್ಲಿ ರಾತ್ರಿ ವೇಳೆ ನೆರೆ ಹಾವಳಿ https://sullia.samagrasamachara.com/2024/08/14/rain/ Wed, 14 Aug 2024 03:42:06 +0000 https://sullia.samagrasamachara.com/?p=69558 The post ಏಕಾಏಕಿ ಸುರಿದ ಧಾರಾಕಾರ ಮಳೆ| ತಾಲೂಕಿನ ಅಲ್ಲಲ್ಲಿ ರಾತ್ರಿ ವೇಳೆ ನೆರೆ ಹಾವಳಿ appeared first on Sullia Samagra Samachara.

]]>
ಸುಳ್ಯ: ಆ.14; ಅವಿಭಜಿತ ಸುಳ್ತ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲಿತ್ತು. ಆ ಬಳಿಕ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಐವರ್ನಾಡು, ಪಂಜ, ಅರಂತೋಡು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ ಮತ್ತಿತರ ಪರಿಸದಲ್ಲೂ ಉತ್ತಮ ಮಳೆಯಾಗಿದೆ.

ಏಕಾಏಕಿ ಸುರಿದ ಮಳೆಯಿಂದ ಕೆಲವೆಡೆ ನದಿ ತೊರೆಗಳು ಉಕ್ಕಿ ಹರಿದು ನೆರೆಭೀತಿ ಉಂಟಾಗಿತ್ತು. ಸಂಪಾಜೆ, ಕಲ್ಲುಗುಂಡಿ, ಕೊಯನಾಡು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಇಲ್ಲಿನ ಮನೆಯೊಂದರ ಸುತ್ತ ರಾತ್ರಿ ಹೊಳೆ ನೀರು ಆವರಿಸಿತು.

ಆತಂಕಿತರಾದ ಮನೆಯವರು ಮನೆಗೆ ಬೀಗ ಹಾಕಿ ಹೊರಗೆ ನಿಂತರು. ಸಂಪಾಜೆಯ ಗ್ಯಾರೇಜ್‌ ಒಂದಕ್ಕೆ ನೀರು ಆವರಿಸಿ ಗ್ಯಾರೇಜ್‌ನಲ್ಲಿದ್ದ ವಾಹನಗಳನ್ನು ಸ್ಥಳೀಯರ ಸಹಕಾರದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.

ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜ ಸಮೀಪದ ಬೊಳ್ಮಲೆಯಲ್ಲಿ ನದಿ ಉಕ್ಕಿ ಹರಿದ ಪರಿಣಾಮ ನೀರು ಹೆದ್ದಾರಿಗೆ ಆವರಿಸಿ‌ ವಾಹನ ಸವಾರರು ಪ್ರಯಾಸಪಟ್ಟರು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ಕೆಲಕಾಲ ಆತಂಕ‌ ಸೃಷ್ಟಿಸಿತ್ತು.

The post ಏಕಾಏಕಿ ಸುರಿದ ಧಾರಾಕಾರ ಮಳೆ| ತಾಲೂಕಿನ ಅಲ್ಲಲ್ಲಿ ರಾತ್ರಿ ವೇಳೆ ನೆರೆ ಹಾವಳಿ appeared first on Sullia Samagra Samachara.

]]>
69558