ಕೊಲ್ಲಮೊಗ್ರು : ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ವತಿಯಿಂದ ಜು.25ರಂದು ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ  ಹಾಗೂ ಶಾಲಾ ವಠಾರ ಸ್ವಚ್ಚತಾ ಕಾರ್ಯಕ್ರಮ 

ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ ಹಾಗೂ ಶಾಲಾ ಸುತ್ತಲಿನ ಪರಿಸರದ ಸ್ವಚ್ಛತಾ ಕಾರ್ಯವನ್ನು ಕೊಲ್ಲಮೊಗ್ರು ಚೈತನ್ಯ ಯುವತಿ ಮಂಡಲದ ವತಿಯಿಂದ ಜು.25 ರಂದು ನಡೆಸಲಾಯಿತು.

ಮಂಡಲದ ಪದಾಧಿಕಾರಿಗಳಾದ ಶ್ರೀಮತಿ ನೀಲಾವತಿ ತಂಬಿನಡ್ಕ, ಶ್ರೀಮತಿ ರೀತಾ ಪಡಿಕಲ್ಲು, ಶ್ರೀಮತಿ ಸುನಂದ ಗಡಿಕಲ್ಲು, ಶ್ರೀಮತಿ ತಾರಾ ಕಲ್ಕೂದಿ, ಶ್ರೀಮತಿ ಲತಾ ಕುಮಾರಿ ತಂಬಿನಡ್ಕ ನೇತೃತ್ವದಲ್ಲಿ ನಡೆಯಿತು.

ಮಳೆಯ ಕಾರಣ ಶಾಲೆಗೆ ರಜೆಯಿದ್ದರೂ ಉಪಹಾರ ವ್ಯವಸ್ಥೆಗೆ ಅಕ್ಷರ ದಾಸೋಹ ಸಿಬ್ಬಂದಿಯಾದ ಶ್ರೀಮತಿ ದಿವ್ಯಾಕುಮಾರಿ ಸಹಕರಿಸಿದರು 

ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಕೆ.ಪಿ, ಸಹಶಿಕ್ಷಕರಾಗಿರುವ, ಲೋಕನಾಥ, ರಾಜೇಶ್, ಚಂದ್ರು  ಇವರುಗಳು ಉಪಸ್ಥಿತರಿದ್ದರು.