ಸುಬ್ರಹ್ಮಣ್ಯ: ಕೆ ಎಸ್ ಎಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರಾಮ್ ಪ್ರಸಾದರಿಗೆ ಪಿ. ಹೆಚ್. ಡಿ. ಪದವಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರಾಮ್ ಪ್ರಸಾದ್ ಎಸ್ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿ. ಹೆಚ್. ಡಿ. ಪದವಿ ನೀಡಿದೆ.

“ಪ್ರಶ್ನಮಾರ್ಗೋತ್ತರಾಧ್ರಸ್ಯ ಪ್ರಶ್ನಾನುಷ್ಠಾನ ಪದ್ದತೇಶ್ಚ ತುಲನಾತ್ಮಕಮ್ ಅಧ್ಯಯನಮ್ ” ಎಂಬ ವಿಷಯದ ಕುರಿತಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ನಾಗರಾಜ ಡಿ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ ಹೆಚ್ ಡಿ ಪದವಿ ಪ್ರದಾನ ಮಾಡಿರುತ್ತಾರೆ. 

ಇವರು ಕಳೆದ ಏಳು ವರ್ಷಗಳಿಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.