ಪಂಜ: ಅನಾರೋಗ್ಯದಿಂದ ಯುವಕ ಸಾವು

ಪಂಜ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಯುವಕ
ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೆ. 30 ರಂದು ಪಂಜದಿಂದ ವರದಿಯಾಗಿದೆ.

ಪಂಜದ ಕಂರ್ಬು ಸೀತಾರಾಮ ಗೌಡ ಮತ್ತು ಶ್ರೀಮತಿ ಉಮಾವತಿ ದಂಪತಿಗಳ ಪುತ್ರ ಅಜಯ್ ಮೃತಪಟ್ಟ ಯುವಕ. ಅವರಿಗೆ 25 ವರ್ಷ ವಯಸ್ಸಾಗಿತ್ತು.

ಅವರು ಸೆ. 29 ರಂದು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಅವರು ಕೆಲವು ವರ್ಷಗಳಿಂದ ನಿಂತಿಕಲ್ಲಿನಲ್ಲಿ ಅಜಯ್ ಫೂಟ್ ವೇರ್ ನಡೆಸುತ್ತಿದ್ದರು. ಮೃತರು ತಂದೆ, ತಾಯಿ, ಸಹೋದರಿ ಶ್ರೀಮತಿ ಜಸ್ಮಿತಾ ದೇವಿಪ್ರಸಾದ್, ಸಹೋದರ ಅಕ್ಷಯ್, ಕುಟುಂಬಸ್ಥರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.