ಸುಬ್ರಹ್ಮಣ್ಯ: ಕೆ ಎಸ್ ಎಸ್ ಕಾಜೇಜಿನಲ್ಲಿ ಹಿಂದಿ ದಿವಸ್ ಆಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಹಿಂದಿ ವಿಭಾಗದ ವತಿಯಿಂದ ದಿನಾಂಕ 25/09/2026ರಂದು “ಹಿಂದಿ ದಿವಸ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ವಹಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ತಟರಕ್ಷಕ ದಳದ ಪ್ರಧಾನ ಕಚೇರಿ ಮಂಗಳೂರು ಇಲ್ಲಿನ ಜಿಲ್ಲಾ ಹಿಂದಿ ಅಧಿಕಾರಿ ಶ್ರೀ ನರೇಶ್ ಕುಮಾರ್ ಗುಪ್ತಾ ಇವರು ಆಗಮಿಸಿದರು. 

ಹಿಂದಿ ಉಪನ್ಯಾಸಕಿ ಭಕ್ತಿಶ್ರೀ ಕೆ ಬಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಹಿಂದಿ ದೇಶಭಕ್ತಿಗೀತೆ ಗಾಯನ, ಹಿಂದಿ ಶಬ್ಧಜ್ಞಾನ, ಸುಂದರ ಕೈಬರಹ ಮತ್ತು ಸ್ಮರಣಶಕ್ತಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕಿ ಶ್ರೀಲತಾ ಕಮಿಲಾ, ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಕೆ ಬಿ, ಹಿಂದಿ ಸಂಘದ ನಾಯಕ ಆಕಾಶ್ ಕುಮಾರ್ ಹಾಗೂ ನಾಯಕಿ ಅನನ್ಯ ಉಪಸ್ಥಿತರಿದ್ದರು. 

ಹಿಂದಿ ಸಂಘದ ನಾಯಕಿ ಅನನ್ಯ ಧನ್ಯವಾದ ಸಮರ್ಪಿಸಿದರು ಹಾಗೂ ಸದಸ್ಯರುಗಳಾದ ದಿಶಾ ಎಸ್ ಮತ್ತು ಶ್ರೇಯಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.