ಸುಬ್ರಮಣ್ಯ: ಕೆ ಎಸ್ ಎಸ್ ಕಾಲೇಜಿನಲ್ಲಿ  ಏಡ್ಸ್ ಅರಿವು ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ  ಸೆ.12 ರಂದು  ಏಡ್ಸ್ ಮುಕ್ತ ಭವಿಷ್ಯದತ್ತ ಒಂದು ಹೆಜ್ಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದರು. ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿ  ಕ್ರಾಫರ್ಡ್ ಜನರಲ್ ಆಸ್ಪತ್ರೆ, ಸಕಲೇಶಪುರದ ವೈದ್ಯರಾದ ಡಾ. ನಿಶ್ಚಿತಾ ಪಿ ಅವರು  ಏಡ್ಸ್ ಸೋಂಕಿನ ಲಕ್ಷಣಗಳು,ಪರಿಣಾಮ ಇತಿಹಾಸ  ಮತ್ತು ಏಡ್ಸ್ ಸೋಂಕಿನಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು.

  ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸಾ ಕೋಶದ  ಸಂಯೋಜಕಿ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಶ್ರೀ ಲತಾ ಕಮಿಲ ಹಾಗೂ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ  ಅಧಿಕಾರಿ ಶ್ರೀಮತಿ ಸುಮಿತ್ರಾ ಕುಮಾರಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಸ್ವಯಂ ಸೇವಕಿ ಅನನ್ಯ ಇವರು ಸ್ವಾಗತಿಸಿ,ಸುಷ್ಮಿತಾ ಇವರು ವಂದಿಸಿದರು. ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕಿ ಯಶ್ವಿನಿ  ನಿರೂಪಿಸಿದರು.