ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಾಟಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಕುಸುಮ ಸಾರಂಗ ರಂಗಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ (IQAC) ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ 11 ಶುಕ್ರವಾರದಂದು ಪ್ರಸಕ್ತ ಸಾಲಿನ ನಾಟಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಖ್ಯಾತ ರಂಗ ನಿರ್ದೇಶಕರು ಹಾಗೂ ತರಬೇತುದಾರರಾದ ಶ್ರೀ ಮಿಥುನ್ ಕುಮಾರ್ ಸೋನಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿ ಮತ್ತು ನಾಟಕದ ಮಹತ್ವ, ಅದರಿಂದ ವ್ಯಕ್ತಿತ್ವ ವಿಕಸನಕ್ಕೆ ಆಗುವ ಲಾಭಗಳ ಕುರಿತು ಒಳನೋಟವುಳ್ಳ ಮಾತುಗಳನ್ನಾಡಿದರು.

ಕಾಲೇಜಿನ IQAC ಸಂಯೋಜಕರಾದ ಶ್ರೀಮತಿ ಶ್ರೀಲತಾ ಕಮಿಲಾ ಅವರು  ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ. ಅವರು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ, ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಕುಸುಮ ಸಾರಂಗ ರಂಗ ಘಟಕದ ವಿದ್ಯಾರ್ಥಿ ನಾಯಕರುಗಳಾದ ಅಶ್ವತ್ III BA ಹಾಗೂ ಸಂಗೀತ III BA ಇವರು ಉಪಸ್ಥಿತರಿದ್ದರು. 

ಕುಸುಮ ಸಾರಂಗ ರಂಗಘಟಕದ ಸಂಯೋಜಕರಾದ ಡಾ. ಪ್ರಸಾದ ಎನ್. ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಹಾಗೂ ನೆರೆದಿದ್ದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ರಂಗಘಟಕದ ಸಹ-ಸಂಯೋಜಕರಾದ ಶ್ರೀಮತಿ ಕೃತಿಕಾ ಪಿ.ಎಸ್. ಅವರು ವಂದನಾರ್ಪಣೆ ನೆರವೇರಿಸಿದರು. ವಿಘ್ನೇಶ್, III B.Com ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.