ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಮಣ್ಯದಲ್ಲಿ ಸೆ.3 ರಂದು ಕಾಲೇಜಿನ ಐ ಕ್ಯೂ ಎ ಸಿ ಮತ್ತು ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತಅಂಡ್  ವಿಭಾಗದಿಂದ, ವಿದ್ಯಾರ್ಥಿಗಳಿಗೆ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟ್ಸ್ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿತ್ತು. 

ಮಂಗಳೂರಿನ ಲೀಫ್ ಸಂಸ್ಥೆಯ ನಿರ್ದೇಶಕರಾದ ಸಂಜೀವ್ ಕುಮಾರ್ ಸಿಂಗ್ ಇವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಸಂಸ್ಥೆಯ ಮ್ಯಾನೇಜರ್ ಆಗಿರುವ ಮಿಸ್ಟರ್ ಧೀರಜ್ ಇವರು ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ದಿನೇಶ್ ಪಿ ಟಿ ಇವರು ಮಾತನಾಡಿ, ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸ್ತುತ ವಿದ್ಯಮಾನದ ಕುರಿತು ಅರಿಯಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕ ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕರಾದ ಶ್ರೀಮತಿ,  ಶ್ರೀಲತಾ ಕಮಿಲಾ, ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ.ಟಿ. ಉಪಸ್ಥಿತರಿದ್ದರು. 

ವಾಣಿಜ್ಯ ಮತ್ತು ಉದ್ಯಮಡಳಿತ ವಿಭಾಗದ ಸಂಯೋಜಕರಾದ ಡಾ. ವಿನ್ಯಾಸ್ ಹೊಸೋಳಿಕೆ ಇವರು ಸ್ವಾಗತಿಸಿ, ವಿದ್ಯಾರ್ಥಿ ನಾಯಕರಾದ ನಿತೇಶ್ ಅಂತಿಮ ಬಿಕಾಂ ವಂದಿಸಿದರು. ದೀಕ್ಷಾ ಅಂತಿಮ ಬಿಬಿಎ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಂತಿಮ ವಾಣಿಜ್ಯ ವಿಭಾಗದ ದಿಶಾ ಇವರು ಕಾರ್ಯಕ್ರಮ ನಿರೂಪಿಸಿದರು.