ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ರೋವರ್ಸ್-ರೇಂಜರ್ಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ 2026-27 ನೇ ಸಾಲಿನಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಶ್ರೀ ದೇವಿಪ್ರಸಾದ್ .ಎ. ನೆರವೇರಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಮಾಜಿಕ ಸೇವಾ ಮನೋಭಾವನ್ನು ಬೆಳೆಸುವ ಇಂತಹ ಘಟಕಗಳ ಮೂಲಕ ಆನುಭವ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ.ಪಿ.ಟಿ. ವಹಿಸಿದ್ದರು.ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ಶೀಮತಿ ಶ್ರೀಲತಾ ಕಮಿಲ,ರೋವರ್ಸ್ ಲೀಡರ್ ಶ್ರೀ ಮನೋಹರ,ಶ್ರೀ ರಾಮ್ ಪ್ರಸಾದ್ ಎಸ್. ರೇಂಜರ್ಸ್ ಲೀಡರ್ ಶ್ರೀಮತಿ ಪ್ರಮೀಳ,ಯೂತ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಸ್ವಾತಿ ಉಪಸ್ಥಿತರಿದ್ದರು.
ರೋವರ್ಸ್ ಲೀಡರ್ ಶ್ರೀ ರಾಮ್ ಪ್ರಸಾದ್ ಸ್ವಾಗತಿಸಿ,ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಶ್ರೀಮತಿ ಸ್ವಾತಿ ವಂದಿಸಿದರು.ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕು.ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.