ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಮತ್ತು ದತ್ತಿನಿದಿ ವಿತರಣೆ ಕಾರ್ಯಕ್ರಮವು ಆ.15 ರಂದು ನಡೆಯಿತು.
ಧ್ವಜಾರೋಹಣವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ರಾಮಚಂದ್ರ ಕೆ.ಬಿ ನೆರವೇರಿಸಿದರು. ಈ ಸಂದರ್ಭದಲ್ಲಿ ಜತೆಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು, ನಿರ್ದೇಶಕರಾದ ಶ್ಯಾಮ್ಬೆ ಕುಮಾರ್, ಗಂಗಾಧರ ಗೌಡ ಕಾಳಮನೆ, ನಾರಾಯಣ ಗೌಡ ಬೊಮ್ಮೆಟ್ಟಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯಶಿಕ್ಷಕಿ ಜಯಲತಾ ಕೆ.ಆರ್, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬಳಿಕ ಜಾಲ್ಸೂರು ಪೇಟೆಯಲ್ಲಿ ಬ್ಯಾಂಡ್ ಸೆಟ್ ನೊಂದಿಗೆ ಮೆರವಣಿಗೆ ನಡೆಯಿತು. ಇದೇ ವೇಳೆ ರಿಕ್ಷ ಚಾಲಕ ಮಾಲಕ ಸಂಘದ ವತಿಯಿಂದ ಸಿಹಿತಿಂಡಿ ವಿತರಣೆ ನಡೆಯಿತು.
ದತ್ತಿನಿದಿ ವಿತರಣಾ ಸಮಾರಂಭ:
ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಜತೆಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು ವಹಿಸಿದರು. ವೇದಿಕೆಯಲ್ಲಿ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್, ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ಫಲಿತಾಂಶ ಲಭಿಸಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿದಿ ವಿತರಿಸಲಾಯಿತು.
ಶಿಕ್ಷಕ ಕುಮಾರ್ ಲಮಾಣಿ ವಂದಿಸಿ, ಶಿಕ್ಷಕ ಶಿವಪ್ರಕಾಶ ಕೆ ನಿರೂಪಿಸಿದರು. ಸ್ವಾತಂತ್ರೋತ್ಸವ ಕಾರ್ಯಕ್ರಮದ ಜಬಾಬ್ದಾರಿಯನ್ನು ದೈಹಿಕ ಶಿಕ್ಷಕ ಶಿವಪ್ರಸಾದ ಕೆ ವಹಿಸಿದ್ದರು. ಸಾಂಸ್ಕೃತಿ ಕಾರ್ಯಕ್ರಮವನ್ನು ಶಿಕ್ಷಕಿ ಮೀನ ಕುಮಾರಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಮೈತ್ತಡ್ಕ ಮೇಸ್ತ್ರಿ ಉಪಹಾರ ನೀಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಲಾಡು ಪ್ರಸಾದ ನೀಡಲಾಯಿತು. ಅಲ್ಲದೆ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಸಿಹಿ ತಿಂಡಿ ವಿತರಿಸಿದರು.