ಗುತ್ತಿಗಾರು: ಇಲ್ಲಿನ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಆ.17ರಂದು ಸಾಮೂಹಿಕ ಆಶ್ಲೇಷ ಬಲಿ ಹಾಗೂ ನಾಗತಂಬಿಲ ನಡೆಯಲಿದೆ.
ಆ ದಿನ ಬೆಳಿಗ್ಗೆ ದೇವಳದ ನಾಗಸನ್ನಿಧಿಯಲ್ಲಿ ನಾಗ ತಂಬಿಲ ಹಾಗೂ ಕ್ಷೀರಾಭಿಷೇಕ ನಡೆಯಲಿದ್ದು, ಬಳಿಕ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿಯ ಮುಖ್ಯಸ್ಥರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.