ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಆ.13 ರಂದು ಸನಾತನ ವಾಗ್ಮಯ ಉದ್ಘಾಟನೆ ಮತ್ತು ವಿವೇಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದ್ದರು. ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್ ಕಡಪದ ಮುಖ್ಯಸ್ಥರಾದ ಅನುಪಮಾನಂದಾಜಿ ಉದ್ಘಾಟಿಸಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನ ಹಿರಿಯ ಸ್ವಯಂಸೇವಕರಾದ ಗೋಪಿನಾಥನ್ ರಾವ್ ಮತ್ತು ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಮತ್ತು ಸನಾತನ ವಾಗ್ಮಯ ಸಮಿತಿಯ ಸಂಯೋಜಕರಾದ ಶ್ರೀಮತಿ ಶ್ರೀಲತಾ ಕಮಿಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನಾತನ ವಾಗ್ಮಯ ಸಮಿತಿಯ ಸದಸ್ಯರಾದ ಶ್ರೀಮತಿ ರಮ್ಯ ಸ್ವಾಗತಿಸಿ, ಸನಾತನ ವಾಗ್ಮಯ ಸಮಿತಿಯ ವಿದ್ಯಾರ್ಥಿ ನಾಯಕ ಶರಣು ವಂದಿಸಿದರು. ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.