ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ, ಆಂತರಿಕ ಗುಣಮಟ್ಟ ಭರವಸಾಕೋಶ , ಮಾನವಿಕ ಸಂಘ ಮತ್ತು ಅಂತಿಮ ಕಲಾ ವಿಭಾಗ ಜಂಟಿ ಆಶ್ರಯದಲ್ಲಿ ಕೆಸರದ ಕೊಬ್ಬು ಕಾರ್ಯಕ್ರಮವನ್ನು ದೇವರಗದ್ದೆಯ ಆಗೋಳಿ ಕಜೆಯಲ್ಲಿ ಆ.8 ರಂದು ನಡೆಸಲಾಯಿತು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ.ಪಿ.ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಹಲವು ರೀತಿಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

ಮಾನವಿಕ ಸಂಘದ ಸಂಯೋಜಕರಾದ ಶ್ರೀಮತಿ ಆರತಿ.ಕೆ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಬೋಧಕ ,ಬೋದಕೇತರ ವೃಂದದವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೈತ್ರಿ ಸ್ವಾಗತಿಸಿ, ಪುಣ್ಯಶ್ರೀ ಧನ್ಯವಾದ ಸಮರ್ಥಿಸಿದರು, ಸಂಖ್ಯಾ ಇವರು ಕಾರ್ಯಕ್ರಮ ನಿರೂಪಿಸಿದರು.