ಮರಕತ:ಚಾಮುಂಡಿ ಕ್ಷೇತ್ರದಲ್ಲಿ ಸಂಕ್ರಮಣ ತಂಬಿಲ

ಗುತ್ತಿಗಾರು: ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಚಾಮುಂಡಿ ಹಾಗೂ ಪಂಜುರ್ಲಿ, ಪುರುಷರಾಯ‌ ದೈವಸ್ಥಾನದಲ್ಲಿ ವೃಷಭ ಸಂಕ್ರಮಣದ ಪ್ರಯುಕ್ತ ತಿಂಗಳ ಸಂಕ್ರಮಣದ ತಂಬಿಲ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಹಾಗೂ ಬ್ರಹ್ಮಕಲಶ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆದು ಬರಲಿ ಎಂದು ಪ್ರಾರ್ಥಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷೆ ನಿರ್ಮಲಾ ಪದ್ಮನಾಭ ಪರಮಲೆ ಹಾಗೂ ಬ್ರಹ್ಮ ಕಲಶ ಸಮಿತಿ. ಅಧ್ಯಕ್ಷ ವಿನ್ಯಾಸ್ ಕೊಚ್ಚಿ ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಮಾವಿನ ಕಟ್ಟೆ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ವಿವಿಧ ಅಭಿವೃದ್ಧಿ ಸಮಿತಿಯ ಸದಸ್ಯರು ಊರವರು ಉಪಸ್ಥಿತರಿದ್ದರು.