ಇನ್ಸ್ಟಾಗ್ರಾಮ್ ನಲ್ಲಿ ಗುತ್ತಿಗಾರಿನ ಬ್ಯಾನರ್ ವೈರಲ್

ಗುತ್ತಿಗಾರು‌: ಇಲ್ಲಿನ ಕಮಿಲ – ಬಳ್ಪ ರಸ್ತೆ ಬದಿಯಲ್ಲಿ ನಾಗರೀಕರೊಬ್ಬರು ಅಳವಡಿಸಿದ ಬ್ಯಾನರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Instagram/niranthdevasyaofficial ಪೇಜ್ ನಲ್ಲಿ ವೈರಲ್ ಆಗುತ್ತಿರುವ ಬ್ಯಾನರ್ ನಲ್ಲಿ ”ಎಲೆಕ್ಷನ್ ಮತ್ತು ಕಲೆಕ್ಷನ್ ನವರಿಗೆ ಕಡ್ಡಾಯವಾಗಿ ಒಳಗೆ ಪ್ರವೇಶವಿಲ್ಲ ಕಚ್ಚುವ ನಾಯಿಗಳಿವೆ ಜಾಗ್ರತೆ” ಎಂದು ಬರೆದಿದ್ದಾರೆ. ಹಲವು ದಿನಗಳಿಂದ ಈ ಬ್ಯಾನರ್ ರಾರಾಜಿಸುತ್ತಿದೆ. ಲಕ್ಷ್ಮಣ ದೇವಸ್ಯ ಎಂಬವರು ತಮ್ಮ ಮನೆ ಬಳಿ ಇಂತಹ ಬರಹವಿರುವ ಬ್ಯಾನರ್ ರಸ್ತೆ ಬದಿ ಅಳವಡಿಸಿದ್ದಾರೆ.

ದೇಶದಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ಊರು ಊರಲ್ಲಿ ನೆಲೆಸುತಿದ್ದು ಅವರನ್ನು ಪತ್ತೆ ಹಚ್ಚ ಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ಅವರು ಪಂಚಾಯತ್ ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ರೀತಿಯ ಬ್ಯಾನರ್ ಅಳವಡಿಸಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿರುವುದಾಗಿ ಕಂಟೆಂಟ್ ಕ್ರಿಯೇಟರ್ ನಿರಂತ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ವ್ಯವಸ್ಥೆಯ ಕುರಿತು ಅವರು ಎತ್ತಿರುವ ಪ್ರಶ್ನೆಗೆ ಸರಿಯಾದ ಉತ್ತರ ಸಿಗದಿರುವಂಥದ್ದು ರಾಜಕೀಯ ನಾಯಕರನ್ನು ಗೇಲಿ ಮಾಡಿದಂತಿದೆ.