ಮಡಪ್ಪಾಡಿ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಸಾವು

ಸುಳ್ಯ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ‌ ಮಡಪ್ಪಾಡಿ ಗ್ರಾಮದ ಅಂಬೆಕಲ್ಲು
ಹೂವಪ್ಪ ಗೌಡರ ಪುತ್ರ ಕಿಶನ್ (ಮಿಟ್ಟಿ ) ಏ.14 ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 28 ವರ್ಷ ವಯಸ್ಸಾಗಿತ್ತು.

ಅವರು ಲಿವರ್ ಸಮಸ್ಯೆಗೊಳಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಂದೆ , ತಾಯಿ ನೀಲಾವತಿ, ಸಹೋದರರಾದ ತನುರಾಜ್ ಮತ್ತು ಸುಜನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.