ಸುಳ್ಯ: ನೂತನ ರಸ್ತೆಯೊಂದರ ಉದ್ಘಾಟನೆ ವೇಳೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಹೊಡೆದ ತೆಂಗಿನಕಾಯಿ ಒಡೆಯದೇ ಇರುವ ವಿಡಿಯೋವೊಂದು ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಘಟನೆ ಪಂಜ ಸಮೀಪದ ಕೂತ್ಕುಂಜ ಎಂಬಲ್ಲಿ ನಡೆದಿದೆ ಎನ್ನಲಾಗಿದ್ದು, ರಸ್ತೆ ಉದ್ಘಾಟನೆಗೆ ಶಾಸಕಿ ಭಾಗೀರಥಿ ಮುರುಳ್ಯರವರು ತೆರಳಿದ್ದರು. ಈ ವೇಳೆ ಪ್ರಾರ್ಥನೆ ಮಾಡಿ ಕಾಂಕ್ರೀಟ್ ರಸ್ತೆಯನ್ನು ತೆಂಗಿನಕಾಯಿ ಹೊಡೆದು ಉದ್ಘಾಟಿಸಲು ನಿರ್ಧರಿಸಲಾಗಿತ್ತು.
ಆದರೆ ಶಾಸಕಿಯವರು ಹೊಡೆದ ತೆಂಗಿನಕಾಯಿ ಒಡೆಯದೇ ಚಿಮ್ಮಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ತೆಂಗಿನಕಾಯಿ ಹೊಡೆಯದೇ ಇದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ.