ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದೇವಳದ ಹೊರಾಂಗಣದಲ್ಲಿ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆ ನೆರವೇರಿಸಿದರು.
ಹೊರಾಂಗಣದಲ್ಲಿ ಸುತ್ತಲೂ ಹಾಕಿದ್ದ ಬಾಳೆ ಎಲೆ, ಅದಕ್ಕೆ ಬಡಿಸಿದ್ದ ದೇವರ ನೈವೇದ್ಯವನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತವರು ಉರುಳು ಸೇವೆ ನೆರವೇರಿಸಿದರು.
ಅದಕ್ಕೂ ಮೊದಲು ಸೇವೆ ಮಾಡುವ ಭಕ್ತರು ದರ್ಪಣ ತೀರ್ಥದಲ್ಲಿ ಮಿಂದು ಅಲ್ಲಿಂದ ಸರತಿ ಸಾಲಿನಲ್ಲಿ ಬಂದು ಎಡೆ ಸೇವೆ ನೆರವೇರಿಸಿದರು.