ದಿವ್ಯಾ ಎಂ. ಕೆ. KSET ಪರೀಕ್ಷೆಯಲ್ಲಿ ತೇರ್ಗಡೆ

ಸುಬ್ರಹ್ಮಣ್ಯ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ದಿವ್ಯಾ ಎಂ ಕೆ ತೇರ್ಗಡೆಯಾಗಿದ್ದಾರೆ.

ಈ ಪರೀಕ್ಷೆಯು ನವೆಂಬರ್ ತಿಂಗಳ 2ನೇ ತಾರೀಕಿನಂದು ನಡೆದಿತ್ತು. ಪ್ರಸ್ತುತ ಇವರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ಆಂಗ್ಲಭಾಷಾ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕಲ್ಮಡ್ಕ ಗ್ರಾಮದ ಅಶ್ವಥ್ ಕುಳ್ಸಿಗೆ ರವರ ಪತ್ನಿ.