ಕೊಲ್ಲಮೊಗ್ರು: ಪಂಚಸಪ್ತತಿ ಕಾರ್ಯಕ್ರಮಕ್ಕೆ ಚಾಲನೆ 

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಚೈತನ್ಯ ಯುವತಿ ಮಂಡಳಿ ಕೊಲ್ಲಮೊಗ್ರು ಇವರ ಆಶ್ರಯದಲ್ಲಿ 75 ದಿನಗಳ ಕಾಲ ನಡೆಯುವ ಪಂಚ ಸಪ್ತತಿ 2025 ಕಾರ್ಯಕ್ರಮಕ್ಕೆ ಅ.11 ರಂದು ಚಾಲನೆ ನೀಡಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಯುವಜನಾ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಚಾಲನೆ ನೀಡಿದರು. ಅಂಗನವಾಡಿ ಕೇಂದ್ರ ಕೊಲ್ಲಮೊಗ್ರು ಇದರ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಮುಂದಿನ ದಿನ ಬೇರೆ ಬೇರೆ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

 ಈ ಸಂದರ್ಭದಲ್ಲಿ ಮಹಾತ್ಮ ಯುವಕ ಮಂಡಲದ ಗೌರವಾಧ್ಯಕ್ಷ ಚಂದ್ರಶೇಖರ ಕೋನಡ್ಕ, ಅಂಗನವಾಡಿಯ ಸಹಾಯಕಿ ಹಾಗೂ ಯುವತಿ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.