ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಹಾಗೂ ಐ ಕ್ಯೂ ಎ ಸಿ ಸಹಯೋಗದೊಂದಿಗೆ ಮಹಿಳಾ ಸಬಲೀಕರಣ ಘಟಕ ವತಿಯಿಂದ ಅ.10 ರಂದು ಮಹಿಳಾ ಮತ್ತು ಕಾನೂನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ. ಟಿ ಅವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚೇತನ್ ಕೂತೂರು ಅವರು ಮಾತನಾಡಿ ಮಹಿಳೆಯರಿಗೆ ಇರುವ ಕಾನೂನುಗಳನ್ನು ಹೇಗೆ ಬಳಸಿಕೊಳ್ಳಬೇಕು ಹಾಗೂ ಆ ಕಾನೂನಿನ ಪ್ರಯೋಜನಗಳು,ಕಾನೂನಿನ ಅಡಿಯಲ್ಲಿ ಕೇಸ್ಗಳನ್ನು ಹೇಗೆ ದಾಖಲಾತಿ ಮಾಡುವುದುಎಂಬುವುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತನ ಕ್ಷೇಮ ಪಾಲನಾಧಿಕಾರಿ ಶಿವಪ್ರಸಾದ್ ಹಾಗೂ ಮಹಿಳಾ ಸಬಲೀಕರಣದ ಸದಸ್ಯರಾದ ನಮಿತಾಎಂ ಎ ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕರು ಹಾಗೂ ಇಂಗ್ಲೀಷ್ ವಿಭಾಗ ಉಪನ್ಯಾಸಕಿ ವನಿತಾ ಕೆ ಎನ್ ಸ್ವಾಗತಿಸಿ, ತೃತೀಯ ಬಿಕಾಂ ವಿದ್ಯಾರ್ಥಿನಿ ಶೀಲಾ ವಂದಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿನಿ ಸಂಖ್ಯಾ ಕಾರ್ಯಕ್ರಮ ನಿರೂಪಿಸಿ.