ಹರಿಹರ ಪಲ್ಲತ್ತಡ್ಕ :- ವಲಯ ಮಟ್ಟದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಭ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ವಲಯ ಅಧ್ಯಕ್ಷರಾದ ತೀರ್ಥರಾಮ ದೋನಿಪಳ್ಳರವರ ಅಧ್ಯಕ್ಷತೆಯಲ್ಲಿ ವಲಯ ಮಟ್ಟದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ತರಬೇತಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲೆ 2 ರ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ, ಧರ್ಮಸ್ಥಳ ಯೋಜನೆ ಬೆಳೆದು ಬಂದ ದಾರಿಯ ಬಗ್ಗೆ, ಇದರಿಂದ ಆನೇಕ ಕುಟುಂಬಗಳು ಅಭಿವೃದ್ಧಿ ಹೊಂದಿರುವ ಬಗ್ಗೆ ವಿವರಿಸಿದರು. ಒಕ್ಕೂಟದ ಬಲವರ್ಧನೆ ಆಗಬೇಕಾದರೆ ಮೊದಲಾಗಿ ಸಂಘಗಳ ವಾರದ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಇದನ್ನು ಒಕ್ಕೂಟದ ಪದಾಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು. ಸಂಘಗಳಿಗೆ ಶ್ರೇಣಿಕರಣ ಯಾವ ರೀತಿ ಬರುತ್ತದೆ ಎಂದು ವಿವರಿಸಿದರು. ಸಂಘಗಳಿಗೆ ನೀಡುವ ಬ್ಯಾಂಕ್ ಸಾಲದ ನಿಯಾಮವಳಿಗಳ ಬಗ್ಗೆ ಹೇಳಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮತ್ತು ಅವುಗಳನ್ನು ಅನುಷ್ಠಾನ ಮಾಡುವ ಬಗ್ಗೆ ವಿವರಿಸಿದರು. ಪ್ರಗತಿನಿಧಿ ಕಾರ್ಯಕ್ರಮಗಳ ನಿಯಾಮವಳಿಗಳ ಬಗ್ಗೆ ವಿವರಿಸಿದರು. ಪ್ರಗತಿನಿಧಿ ಭದ್ರತೆ ಬಗ್ಗೆ, ಸಿಡ್ಬಿ ಸಾಲದ ಬಗ್ಗೆ, ಪ್ರಗತಿ ರಕ್ಷಾ ಕವಚದ ಬಗ್ಗೆ ವಿವರಿಸಿದರು. ಕೃಷಿ ಕಾರ್ಯಕ್ರಮ, ಜ್ಞಾನ ವಿಕಾಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಬಗ್ಗೆ ಹೇಳಿದರು. ಸಂಘಗಳಲ್ಲಿ ಮಾಸಿಕ ವರದಿಗಳ ವಿವರಗಳನ್ನು ಪ್ರತಿಯೊಬ್ಬ ಸದಸ್ಯರು ಯಾವ ರೀತಿ ಗಮನಿಸಬೇಕೆಂದು ಹೇಳಿದರು. ಪರಿಣಾಮಕಾರಿಯಾಗಿ ಒಕ್ಕೂಟದ ಸಭೆಗಳನ್ನು ನಡೆಸುವ ಬಗ್ಗೆ ಹೇಳಿದರು. ಪದಾಧಿಕಾರಿಗಳ ನಾಯಕತ್ವದ ಬಗ್ಗೆ ಮತ್ತು ಜವಾಬ್ದಾರಿಗಳ ಬಗ್ಗೆ ವಿವರಿಸಿದರು.

ಸೇವಾಪ್ರತಿನಿಧಿಯವರು ಪರಿಣಾಮಕಾರಿಯಾಗಿ ಪ್ರತಿಯೊಂದು ಸಂಘಗಳ ವಾರದ ಸಭೆಗಳಿಗೆ ಭೇಟಿಯಾಗುವಾಗೆ ಒಕ್ಕೂಟದ ಪದಾಧಿಕಾರಿಗಳು ಸಹಕಾರವನ್ನು ನೀಡಬೇಕು ಎಂದು ಹೇಳಿದರು.ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ವಿಚಕ್ಷಣಾ ಪ್ರಬಂಧಕರಾದ ವಿಶ್ವನಾಥರವರು ಮಾತನಾಡುತ್ತಾ, ಮರುಪಾವತಿ ಚೀಟಿಯನ್ನು ಪ್ರತಿ ವಾರ ಬರೆಯುವ ಬಗ್ಗೆ ಮತ್ತು ಅದನ್ನು ಗಮನಿಸುವ ಬಗ್ಗೆ, ಸಾಲಕ್ಕೆ ಬಡ್ಡಿಯನ್ನು ವಾರ ವಾರ ಯಾವ ರೀತಿಯಲ್ಲಿ ವಿಧಿಸುವ ಬಗ್ಗೆ, ಬ್ಯಾಂಕ್ ನಲ್ಲಿ ಬಡ್ಡಿ ಯಾವ ರೀತಿಯಲ್ಲಿ ವಿಧಿಸುವ ಬಗ್ಗೆ ವಿವರಿಸಿದರು.

ಸಾಲದ ವ್ಯವಹಾರದಲ್ಲಿ ಸಂಘದ ಸಿ ಸಿ ಖಾತೆಯಲ್ಲಿ ಲಾಭಂಶ ಯಾವ ರೀತಿಯಲ್ಲಿ ಜಮೆ ಆಗುತ್ತದೆ ಎಂದು ಹೇಳಿದರು. ಸಂಘಗಳ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳ ಪಾತ್ರದ ಬಗ್ಗೆ, ಒಕ್ಕೂಟ ಸಭೆಯ ದಾಖಲಾತಿಗಳ ನಿರ್ವಹಣೆ ಬಗ್ಗೆ ಹೇಳಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ 12 ಒಕ್ಕೂಟಗಳ ಅಧ್ಯಕ್ಷರುಗಳು ಮತ್ತು ಎಲ್ಲಾ ಪದಾಧಿಕಾರಿಗಳು, ವಲಯದ ಎಲ್ಲಾ ಸೇವಾಪ್ರತಿನಿಧಿಯವರು ಭಾಗವಹಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು. ಕೊಲ್ಲಮೊಗ್ರ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿರವರಾದ ಸಾವಿತ್ರಿರವರು ಕಾರ್ಯನಿರೂಪಿಸಿದರು. ಕುಲ್ಕುಂದ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿನಾಕ್ಷಿರವರು ಧನ್ಯವಾದವಿತ್ತರು.