ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವತಿಯಿಂದ ನಡೆಸಲ್ಪಡುವ ಕೆ ಎಸ್ ಎಸ್ ಕಾಲೇಜ್ ನಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ BSC ಪದವಿಯನ್ನು ಪ್ರಾರಂಭಿಸುವಂತೆ ಸೆ.17 ರಂದು ಮಾನ್ಯ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಮುಜುರಾಯಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಯವರು ಹಾಗೂ ಸರ್ವ ಸದಸ್ಯರ ಮಾರ್ಗದರ್ಶನದಲ್ಲಿ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ನಾಯರ್ ಹಾಗೂ ಶಿಕ್ಷಕ ರಕ್ಷಕ ಸಂಘದ ನಿರ್ದೇಶಕ ರಾದ ಶಿವರಾಮ ರೈ ಯವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಇದಕ್ಕೆ ಪೂರಕವಾಗಿ ಮುಜುರಾಯಿ ಸಚಿವರು ಹಾಗೂ ಆಯಕ್ತರು ಸೂಕ್ತವಾಗಿ ಸ್ಪಂದಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಬಿಸುವ ಕುರಿತು ಭರವಸೆ ನೀಡಿರುತ್ತಾರೆ.ಈ ಸಂದರ್ಭದಲ್ಲಿ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ನಾಯರ್ ಕಾರ್ಯದರ್ಶಿ ತೇಜಸ್ ಕಳಿಗೆ, ಪವನ್ ಎಮ್ ಡಿ, ಪ್ರದೀಪ್ ಕಳಿಗೆ, ದಿನೇಶ್ ಮಲ್ಲಿಗೆಮಜಲು, ನಿತಿನ್ ಭಟ್ ಉಪಸ್ಥಿತರಿದ್ದರು