ಬೆಳ್ಳಾರೆ: ಬ್ರೇಕ್ ಫೇಲ್ ಗೊಂಡು ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಶೇಣಿಯಿಂದ ವರದಿಯಾಗಿದೆ.
ಚೊಕ್ಕಾಡಿಯಿಂದ ಶೇಣಿ ಮಾರ್ಗವಾಗಿ ಕೊಂಡೆಬಾಯಿಗೆ ಬಾಡಿಗೆಗೆ ಬಂದು ಹಿಂತಿರುಗಿ ಹೋಗುತ್ತಿದ್ದ ರಿಕ್ಷಾ ಶೇಣಿ ಸಮೀಪದ ಕುಳ್ಳಾಜೆಯಿಂದ ಚೇಡಾವು ಇಳಿಯುವಾಗ ಬ್ರೇಕ್ ಫೈಲ್ ಆಗಿದ್ದು, ಸುಮಾರು 25 ಅಡಿಗಳಷ್ಟು ಆಳ ಇರುವ ಮನೆಯಂಗಳಕ್ಕೆ ಬಿದ್ದು ರಿಕ್ಷಾ ಜಖಂ ಗೊಂಡಿದೆ.
ಚಾಲಕ ಭಾಸ್ಕರ ಆಚಾರ್ಯ ಕುಕ್ಕುಜಡ್ಕರವರ ಕಾಲು, ಸೊಂಟ, ತಲೆಗೆ ಗಂಭೀರ ಎಟಾಗಿದ್ದು ಅವರನ್ನು ಸ್ಥಳೀಯರ ಸಹಕಾರದಿಂದ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು