ಸುಳ್ಯ: ಇಲ್ಲಿನ ಗೌಡರ ಯುವ ಸೇವಾ ಸಂಘದಿಂದ ಪ್ರವರ್ತಿಸಲ್ಪಡುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ನಿ) ಇದರ ಮಹಾಸಭೆ ಸೆ.14 ರಂದು ಸಂಘದ ಅಧ್ಯಕ್ಷರಾದ ಕೆ.ಸಿ.ಸದಾನಂದ ರವರ ಅಧ್ಯಕ್ಷತೆಯಲ್ಲಿ ಗೌಡರ ಸಮುದಾಯ ಭವನ ಕೊಡಿಯಾಲಬೈಲು, ಸುಳ್ಯ ಇಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕೆ.ಸಿ ಸದಾನಂದ, “ನಮ್ಮ ಸಂಘವು ವಾರ್ಷಿಕ ಉತ್ತಮ ವ್ಯವಹಾರ ನಡೆಸಿದ್ದು 2.28 ಲಕ್ಷ ಲಾಭಾಂಶ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15% ಲಾಭಾಂಶ ವಿತರಿಸಲಾಗುವುದು” ಎಂದು ಘೋಷಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷ, ಹಾಲಿ ನಿರ್ದೇಶಕ ಪಿ.ಸಿ.ಜಯರಾಮ್, ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಜಾಕೆ ಸದಾನಂದ, ಚಂದ್ರಾ ಕೋಲ್ಟಾರ್, ಪಿ.ಎಸ್.ಗಂಗಾಧರ, ಮೋಹನ್ ರಾಂ ಸುಳ್ಳಿ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ಜಯಲಲಿತ ಕೆ.ಎಸ್, ನಳಿನಿ ಸೂರಯ್ಯ, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಪ್ರೇಮಾ ಕೆ.ಎಲ್, ವೃತ್ತಿಪರ ನಿರ್ದೇಶಕ ಡಾ.ಎನ್.ಎ.ಜ್ಞಾನೇಶ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಮಹಾಸಭೆಯ ವರದಿ ವಾಚಿಸಿದರು. ಕೆ.ಸಿ ಸದಾನಂದ ಸ್ವಾಗತಿಸಿ, ದಿನೇಶ್ ಮಡಪ್ಪಾಡಿ ವಂದಿಸಿದರು.