ಫೈನಾನ್ಸ್ ನಿಂದ ಕಿರುಕುಳ| ಲಾರಿ ಮಾಲೀಕ ಆತ್ಮಹತ್ಯೆಗೆ ಯತ್ನ

ಗುತ್ತಿಗಾರು: ಸರಕಾರ ಕೆಂಪು ಕಲ್ಲು ನಿಷೇಧ ಮಾಡಿದ್ದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು‌ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕ ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿರುವ ಘಟನೆ ವರದಿಯಾಗಿದೆ.

ಇಂದು(ಸೆ.10) ಮಧ್ಯಾಹ್ನ ಮನೆಯಲ್ಲಿ ಈ ಘಟನೆ ನಡೆದಿದ್ದು ವಿಷಯ ತಿಳಿದ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದುಬಂದಿದೆ.

ಸಾಲ ಪಡೆದ ಹಾಗೂ ಫೈನಾನ್ಸ್ ಕಿರುಕುಳದ ಕುರಿತು ಚೀಟಿ ಬರೆದಿರುವುದಾಗಿಯೂ ಅದು ಮನೆಯವರಿಗೆ ದೊರೆತಿರುವುದಾಗಿ ಹೇಳಲಾಗುತ್ತಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.