ಗುತ್ತಿಗಾರು: ಇಲ್ಲಿನ ಸಮೀಪದ ಮಡಪ್ಪಾಡಿ ಗ್ರಾಮದ ಪೂಂಬಾಡಿಯಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿ ಕೃಷಿ ಹಾಗೂ ವಾಹನಕ್ಕೆ ಹಾನಿ ಮಾಡಿರುವ ಘಟನೆ ವರದಿಯಾಗಿದೆ.
ಗ್ರಾಮದ ಪೂಂಬಾಡಿ ಗಣಪಯ್ಯ ಗೌಡರವರ ತೋಟಕ್ಕೆ ರಾತ್ರಿ ವೇಳೆಗೆ ದಾಳಿ ಮಾಡಿದ ಒಂಟಿ ಸಲಗ 10ಹೆಚ್ಚು ತೆಂಗಿನ ಮರ, ಅಪಾರ ಬಾಳೆ ಗಿಡ ನಾಶ ಮಾಡಿದೆ.
ತೋಟದ ದಾರಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿ ಮಾಡಿದೆ. ಪೂಂಬಾಡಿ ಪರಿಸರದಲ್ಲಿ ಕಳೆದ ಕೆಲ ಸಮಯದಿಂದ ನಿರಂತರ ಆನೆ ದಾಳಿ ನಡೆಯುತ್ತಿದ್ದು ಕೃಷಿಕರು ಆತಂಕದಿಂದ ಬದುಕುವಂತಾಗಿದೆ.