ಸುಬ್ರಮಣ್ಯ: ಯುವಕ ಮಂಡಲ ಬಿಳಿನೆಲೆ ವತಿಯಿಂದ 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ 

 ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಪ್ರಯುಕ್ತ ಬಿಳಿನೆಲೆ ಯುವಕ ಮಂಡಲ ವತಿಯಿಂದ  ಆ.17 ರಂದು ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಿದ್ದು.

ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಹಲವು ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮವು ಪೂರ್ವಾಹ್ನ ಗಂಟೆ 9.00ರಿಂದ ಪ್ರಾರಂಭವಾಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಾಣಿ ದಿನೇಶ್ ಮುಖ್ಯ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ ನಡೆಸಲಿದ್ದಾರೆ.  ಅಧ್ಯಕ್ಷತೆಯನ್ನು ಸೋಮಶೇಖರ್ ಕೈಕಂಬ ನಿವೃತ್ತ ಸೈನಿಕರು ವಹಿಸಲಿದ್ದಾರೆ. 

ಮುಖ್ಯ ಅಥಿತಿಗಳಾಗಿ ರೇವತಿ ಕೇಶವ, ಹೊಸೊಕ್ಲು ನಿರ್ದೇಶಕರು, PACS ಬಿಳಿನೆಲೆ ಹಾಗೂ ಬಾಲಕೃಷ್ಣ ಗೌಡ ಎಮ್ ಮುಗೇರು ಅಧ್ಯಾಪಕರು, ಸೈಂಟ್ ಆಂಟನಿ ಪ್ರೌಢಶಾಲೆ ಉದನೆ ವಹಿಸಲಿದ್ದಾರೆ. ಕಾರ್ಯಕ್ರದಲ್ಲಿ ಮೋಹಿನಿ ಕಾಳಪ್ಪಾಡಿ ನಾಟಿ ವೈದ್ಯರು ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಿದ್ದಾರೆ. 

ನಂತರ ಆಟೋಟಗಳು ನೆಡೆದು ಸಂಜೆ 5 ಗಂಟೆ ಯಿಂದ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಿಳಿನೆಲೆ ಗ್ರಾಮದ ಸ್ಥಳೀಯರು ಭಾಗವಹಿಸಬೇಕೆಂದು ಯುವಕಮಂಡಲದ ಆಡಳಿತ ಮಂಡಳಿಯು ತಿಳಿಸಿದೆ.

ಆಟಗಳು: ಪುರುಷರಿಗೆ ನಿಧಾನ ಬೈಕ್ ರೇಸ್, ಮಡಿಕೆ ಒಡೆಯುವುದು, ಅಡ್ಡಗಂಬ ನಡಿಗೆ, ಮೂರು ಕಾಲಿನ ಓಟ, ಹಗ್ಗ-ಜಗ್ಗಾಟಕಬಡ್ಡಿ ನಡೆಯಲಿದೆ. ಮಹಿಳೆಯರಿಗೆ ಹಗ್ಗಜಗ್ಗಾಟ, ನಿಧಾನ ಸ್ಕೂಟಿ ರೇಸ್, ಭಕ್ತಿಗೀತೆ, ಮಡಿಕೆ ಒಡೆಯುವುದು, ಲಕ್ಕಿಗೇಮ್, ನಿಂಬೆ ಚಮಚ ಓಟ, ಡಾಜ್‌ಬಾಲ್ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಅದರಲ್ಲಿ ಕಿರಿಯ ವಿಭಾಗ (1ರಿಂದ 4ನೇ ತರಗತಿ) ಭಕ್ತಿಗೀತೆ, ಲಕ್ಕಿಗೇಮ್, 50 mtr. ಹಿರಿಯ ವಿಭಾಗ(5ರಿಂದ 8ನೇ ತರಗತಿ) ಭಕ್ತಿಗೀತೆ, ಲಕ್ಕಿಗೇಮ್, ನಿಂಬೆ ಚಮಚ ಓಟ. ಅಂಗನವಾಡಿ ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ ಯು ನಡೆಯಲಿದೆ.