ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ಬಿಳಿನೆಲೆ – ಕೈಕಂಬದಲ್ಲಿ ಯುವಕ ಮಂಡಲ ವತಿಯಿಂದ ಆ.17ರಂದು 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ಸಾರ್ವಜನಿಕರಿಗೆ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದೇವರಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ಉದ್ಘಾಟಿಸಲಿದ್ದು, ನಿವೃತ್ತ ಸೈನಿಕ ಸೋಮಶೇಖರ್ ಕೈಕಂಬ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಳಿನೆಲೆ ಪ್ರಾ.ಕೃ.ಸಂಘದ ನಿರ್ದೇಶಕಿ ರೇವತಿ ಹೊಸೊಕ್ಲು, ಶಿಕ್ಷಕ ಬಾಲಕೃಷ್ಣ ಗೌಡ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ನಾಟಿ ವೈದ್ಯೆ ಮೋಹಿನಿ ಕಾಳಪ್ಪಾಡಿ ಅವರಿಗೆ ಸನ್ಮಾನ ನೆರವೇರಲಿದೆ. ಅದೇ ದಿನ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.