ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಗುತ್ತಿಗಾರು: ಇಲ್ಲಿನ ಸಮೀಪದ ಕೆಂಬಾರೆ ಬಳಿ ವ್ಯಕ್ತಿಯೋರ್ವ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಮೂರು ದಿನದ ಹಿಂದೆ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು ಮೃತದೇಹ ಕೊಳೆತ ಸ್ಥಿತಿಯಲ್ಲಿದೆ. ಮೃತರನ್ನು ಕೆಂಬಾರೆ ಕುಂಞ ನಾಯ್ಕ(45) ಅವರ ಪುತ್ರ ಸುಕುಮಾರ ಎಂದು ಗುರುತಿಸಲಾಗಿದೆ.

ಅವಿವಾಹಿತನಾಗಿರುವ ಈತ ವಳಲಂಬೆಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದರು.
ಅಲ್ಲಿಂದ ಮೂರು ದಿನದ ಹಿಂದೆ ಮನೆಗೆ ಬಂದು ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.