ಸುಬ್ರಹ್ಮಣ್ಯ: ಯುವಕ ಮಂಡಲ ಬಿಳಿನೆಲೆ ಕೈಕಂಬ ಇದರ ವತಿಯಿಂದ ರಾಷ್ಟ್ರೀಯ ಕಬ್ಬಡಿ ಆಟಗಾರ ಆಶಿಶ್ ಕೋಟೆಬಾಗಿಲು ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಿದ್ದಾರೆ.
ಯುವಕ ಮಂಡಲದ ಪೂರ್ವ ಅಧ್ಯಕ್ಷ ದಿ|ಯೋಗೀಶ್ ಕೋಟೆಬಾಗಿಲು ಇವರ ಮಗ ಆಶಿಶ್ ಕೋಟೆಬಾಗಿಲು ಬಿಳಿನೆಲೆ ಸಹಕಾರಿ ಸಂಘದ ಅಧ್ಯಕ್ಷ ವಾಡಿಯಪ್ಪ ಗೌಡ ಎರ್ಮಾಯಿಲ್ ಸ್ಥಳೀಯ ಪಂಚಾಯತ್ ಸದಸ್ಯರಾದ ಮುರಳೀಧರ.ಎ, ಭವ್ಯ ಕುಕ್ಕಾಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ ಯುವಕಮಂಡಲ ಉಪಾಧ್ಯಕ್ಷ ಪ್ರದೀಪ್ ಕಳಿಗೆ, ಪೂರ್ವ ಅಧ್ಯಕ್ಷ ಪ್ರಶಾಂತ್ ಬರೆಮೇಲು ಹಾಗು ಆಶಿಕ್ ಅವರ ತಾಯಿ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ ಸಂಧ್ಯಾಮನಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ವಿಜಯಕುಮಾರ್ ನಡುತೋಟ ಸ್ವಾಗತಿಸಿ ವಂದಿಸಿದರು.