ಭಾರೀ ಮಳೆ ಹಿನ್ನಲೆ| ಸುಳ್ಯ ತಾಲೂಕಿನಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ಜು.3ರ ಇಂದು ರಜೆ

ಸುಳ್ಯ: ತಾಲೂಕಿನಲ್ಲಿ ಭಾರೀಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.3 ರಂದು ಅಂಗನವಾಡಿ, ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸುಳ್ಯದ ಮಾನ್ಯ ತಹಶೀಲ್ದಾರ್ ರಜೆಯನ್ನು ಘೋಷಿಸಿದ್ದಾರೆ.