ಮೆಟ್ಟಿನಡ್ಕ: ದನದ‌‌ ಕೊಟ್ಟಿಗೆಗೆ ಮರ ಬಿದ್ದು ಹಾನಿ

ಗುತ್ತಿಗಾರು: ಮರವೊಂದು ದನದ ಹಟ್ಟಿಯ ಮೇಲೆ ಮುರಿದು ಬಿದ್ದು ಹಟ್ಟಿ ಸಂಪೂರ್ಣ ಹಾನಿಗೊಂಡ ಘಟನೆ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಿಂದ ವರದಿಯಾಗಿದೆ.

ಇಲ್ಲಿನ ಗೌರಿಗುಂಡಿ ಜಾನು ನಾಯ್ಕ ಎಂಬವರ ಮನೆಯ ಬಳಿ ಇದ್ದ ಹಟ್ಟಿಗೆ ಬುಧವಾರ ಸಂಜೆ ಸುರಿದ ಮಳೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ದನದ ಹಟ್ಟಿ ಸಂಪೂರ್ಣ ಹಾನಿಗೊಂಡಿದೆ. ಹಟ್ಟಿಯಲ್ಲಿದ್ದ ದನ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದೆ ಎಂದು ತಿಳಿದು ಬಂದಿದೆ.