ಕೊಲ್ಲಮೊಗ್ರು: ಹರಿಹರ ಪಲ್ಲತಡ್ಕ ಗ್ರಾಮದ ಮಲ್ಲಾರ ಎಂಬಲ್ಲಿ ಜೂ.24 ರಂದು ಹಾಲುಮಡ್ಡಿ ಮರವೊಂದು ಮುರಿದು ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ನಲ್ಲಿದ್ದವರು ಪವಾಡ ಸದೃಶ್ಯರಾಗಿ ಪಾರಾದ ಘಟನೆ ವರದಿಯಾಗಿದೆ.
ರಸ್ತೆ ಬದಿ ನಿಲ್ಲಿಸಿದ ಪಿಕಪ್ ಮೇಲೆ ಮರ ಬಿದ್ದಿದ್ದು ಈ ಸಂದರ್ಭ ಅದರಲ್ಲಿ ಎರಡು ಜನ ಇದ್ದರೆನ್ನಲಾಗಿದೆ. ಪಿಕಪ್ ಜಖಂ ಆಗಿದ್ದು ಅದರಲ್ಲಿ ಇದ್ದವರು ಸಾವಿನ ದವಡೆಯಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ತಿಳಿದುಬಂದಿದೆ.