ಕುಕ್ಕೆ ಸುಬ್ರಹ್ಮಣ್ಯ: ಮೇ.30ರಿಂದ ಭಕ್ತಾಧಿಗಳಿಗೆ ಬೆಳಗಿನ ಉಪಹಾರ ಆರಂಭ

ಸುಬ್ರಹ್ಮಣ್ಯ: ಇಲ್ಲಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಮೇ.30ರಿಂದ ಬೆಳಗ್ಗಿನ ಉಪಹಾರ ಯೋಜನೆ ಆರಂಭವಾಗಲಿದೆ.

ನೂತನ ವ್ಯವಸ್ಥಾಪನ ಸಮಿತಿಯ ಪ್ರಥಮ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಲಾಗಿದ್ದು, ದತ್ತಿ ಇಲಾಖೆಯಿಂದ ಅನುಮತಿ ದೊರೆತಿದೆ.

ಈ ಹಿಂದೆ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಕ್ಷೇತ್ರದ ವತಿಯಿಂದ ಭಕ್ತರಿಗೆ ಬೆಳಗ್ಗಿನ ಉಪಾಹಾರ ನೀಡುವ ಯೋಜನೆ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಯೋಜನೆ ಆರಂಭಕ್ಕೆ ಸಹಮತ ಸೂಚಿಸಿದರು. ಶೀಘ್ರದಲ್ಲಿ ಬೆಳಗ್ಗಿನ ಉಪಾಹಾರ ಯೋಜನೆ ಆರಂಭಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದ್ದು ಮೇ. 30ರಿಂದ ಅನುಷ್ಠಾನಕ್ಕೆ ಬರಲಿದೆ.