ಗುತ್ತಿಗಾರು.ಮೇ.23: 2024-25 ನೇ ಸಾಲಿನ ಪರೀಕ್ಷೆ ಬರೆದ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶಿಶಿರ. ಬಿ. ಎಸ್. ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದಿದ್ದಾರೆ.
ಕನ್ನಡ ಹಾಗೂ ಹಿಂದಿ ವಿಷಯಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಹಿಂದಿಯಲ್ಲಿ 99 ಅಂಕಗಳಿಗೆ 1 ಅಂಕ ಸೇರ್ಪಡೆಯಾಗಿ 100ರಲ್ಲಿ 100, ಕನ್ನಡದಲ್ಲಿ 122 ಅಂಕಗಳಿಗೆ 3 ಅಂಕ ಸೇರಿ 125ಕ್ಕೆ 125 ಅಂಕಗಳನ್ನು ಪಡೆದು 624 ಅಂಕ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶಿಶಿರ್ ಬಿ. ಎಸ್. ಗುತ್ತಿಗಾರು ಗ್ರಾಮದ ವಳಲಂಬೆ ಗುಂಡಿಮಜಲು ಮನೆ ಬಿ. ಕೆ. ಶ್ರೀಕೃಷ್ಣ ಮತ್ತು ಶಾಲಿನಿ ದಂಪತಿಗಳ ಪುತ್ರ. ಈ ಸಾಧನೆಯೊಂದಿಗೆ ಸುಳ್ಯ ತಾಲೂಕಿನ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನಿಗಳಾಗಿದ್ದಾರೆ.