ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಇದರ ಪ್ರಥಮ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡ ಕೆ. ಎಂ. ಮುಸ್ತಫ ರವರನ್ನು ಸುಳ್ಯ ತಾಲೂಕು ಕೃಷಿ ಪ್ರಾಥಮಿಕ ಸಹಕಾರಿ ಸಂಘ TAPCMS ವತಿಯಿಂದ ಅಭಿನಂದಿಸಲಾಯಿತು.
ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಮತ್ತು ಉಪಾಧ್ಯಕ್ಷ ಪಿ. ಎಸ್. ಗಂಗಾಧರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ, ನಿರ್ದೇಶಕ ಸುರೇಶ್ ಅಮೈ, ಇಂಜಿನಿಯರ್ ಪ್ರಸಾದ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು