ಸುಳ್ಯ: ಮನೆ ಮುಂದೆ‌ ಕಸದ ಎಸೆದು ಹೋದ ವ್ಯಕ್ತಿ| ಸಿಸಿ‌‌ ಕ್ಯಾಮರಾದಲ್ಲಿ ದೃಶ್ಯ ಸೆರೆ

ಸುಳ್ಯ: ಇಲ್ಲಿನ ಕುರುಂಜಿಭಾಗ್‌ ಮನೆಯ ಮುಂಭಾಗದ ಕಿಟಕಿಯ ಸನ್‌ಶೇಡ್‌ ಮೇಲೆ ಅಪರಿಚಿತ ವ್ಯಕ್ತಿಯೋರ್ವ ತ್ಯಾಜ್ಯ ಎಸೆದು ಕಿಡಿಗೇಡಿತನ ಕೃತ್ಯ ಎಸಗಿದ ಘಟನೆ ನಡೆದಿದ್ದು, ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ದೂರು ನೀಡಲಾಗಿದೆ.

ಕುರುಂಜಿಭಾಗ್‌ನಲ್ಲಿ ನೀರಿನ ಪೈಪ್‌ ಕಾಮಗಾರಿ ನಡೆಸುವ ಕಾರ್ಮಿಕರಲ್ಲಿ ಓರ್ವ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೈಯಲ್ಲಿ ತ್ಯಾಜ್ಯದ ಚೀಲ ಹಿಡಿದು ಕೊಂಡು ಬರುವ ವ್ಯಕ್ತಿ ಎಸೆಯುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಮನೆ ಬಳಿ ತ್ಯಾಜ್ಯ ದುರ್ವಾಸನೆ ಬರಲು ಆರಂಭಿಸಿದ್ದರಿಂದ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಸಿಸಿ ಕೆಮರಾ ದೃಶ್ಯಾವಳಿ ಸಹಿತ ನಗರ ಪಂಚಾಯತ್‌ಗೂ ದೂರು ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ವಹಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.