ಸುಳ್ಯ: 24ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್| ಕೇರಳದಲ್ಲಿ ಪೊಲೀಸ್ ಬಲೆಗೆ ಬಿದ್ದ ಖದೀಮರು

ಸುಳ್ಯ: ಬರೋಬ್ಬರಿ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸುಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕೇರಳದಲ್ಲಿ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ವಿ.ಟಿ ಬಾಬು ಯಾನೆ ಆಗಸ್ಟಿನ್ (55 ವರ್ಷ ) ವಿ.ಟಿ. ರಾರಿ ಯಾನೆ ವಿ.ಟಿ. ತೋಮಸ್ (52ವರ್ಷ ) ಆರೋಪಿಗಳನ್ನು ಕೇರಳದ ಕೊಟ್ಟಯಂ ಬಳಿ ಬಂಧಿಸಲಾಗಿದೆ. ಡಿವೈಎಸ್ಪಿ ಪುತ್ತೂರು ಉಪವಿಭಾಗ ಮತ್ತು ಸಿ ಪಿ ಐ, ಸುಳ್ಯ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆದಿತ್ತು.

ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ. ಮತ್ತು ಸರಸ್ವತಿ ಬಿ.ಟಿ, ಸಹಾಯಕ ಉಪನಿರೀಕ್ಷಕರಾದ ಉದಯ್ ಭಟ್,ಪಿ.ಸಿ ದಿನೇಶ್ ಮತ್ತು ಪಿ.ಸಿ. ಪದ್ಮಾವತಿರವರುಗಳನ್ನೊಳಗೊಂಡ ತಂಡ ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.