ಸುಳ್ಯ: ಇಲ್ಲಿನ ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ) ನ ಅಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು, ಉಪಾಧ್ಯಕ್ಷರಾಗಿ ಅವಿನಾಶ್ ಡಿ.ಕೆ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ನ ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. 14 ನಿರ್ದೇಶಕರಲ್ಲಿ 12 ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದಿದ್ದರು.
ನೂತನ ಅಧ್ಯಕ್ಷರಿಗೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ , ಭೂ ಬ್ಯಾಂಕಿನ ಮಾಜಿ ಅಧ್ಯಕ್ಷ ಉಮೇಶ್ ಪಿ.ಕೆ., ಮಾಜಿ ಉಪಾಧ್ಯಕ್ಷ ಸೋಮನಾಥ ಪೂಜಾರಿ, ಮಾಜಿ ನಿರ್ದೇಶಕಿ ಸುವರ್ಣಿನಿ, ಪ್ರಮುಖರಾದ ವಿನಯ್ ಕುಮಾರ್ ಕಂದಡ್ಕ, ಶ್ರೀಪತಿ ಭಟ್ ಮಜಿಗುಂಡಿ, ಎ.ಟಿ ಕುಸುಮಾಧರ, ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಡಂಗಾಯ, ಕನಕಮಜಲು ಸೊಸೈಟಿ ಅಧ್ಯಕ್ಷ ಸುಧಾಕರ ಕಾಮತ್, ನಾರಾಯಣ ಶಾಂತಿನಗರ, ಮಾಧವ ಜಾಲ್ಸೂರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.