ಕುಕ್ಕೆ ಸುಬ್ರಹ್ಮಣ್ಯ- ಕೈಕಂಬ ರಸ್ತೆ ಮಧ್ಯೆ ‌ನಿಧಿ ಶೋಧ!! ನಿಧಾನವಾಗಿ ಸಂಚರಿಸಲು ಮನವಿ ಮಾಡಿದ ನಾಗರಿಕರು

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದಿಂದ ಗುಂಡ್ಯಕ್ಕೆ ಸಾಗುವ ರಾಜ್ಯ ಹೆದ್ದಾರಿಯ ಕೈಕಂಬ ಬಳಿ ರಸ್ತೆ ಮಧ್ಯೆ ನಿಧಿ ಶೋಧ(!) ನಡೆಸಲಾಗಿದೆ ಎಂದು ಹಾಕಲಾಗಿರುವ ಬ್ಯಾನರ್ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ನಿತ್ಯ ಹೈರಾಣಾದ ನಾಗರೀಕರು ಹಾಗೂ ವಾಹನ ಮಾಲೀಕರು ಲೋಕೋಪಯೋಗಿ ಇಲಾಖೆ‌ ಮೇಲೆ ಕೆರಳಿದ್ದು, ಅಧಿಕಾರಿಗಳು ನಿಧಿಶೋಧ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಬ್ಯಾನರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆ ಸಂಚಾರ ತೀರಾ ದುಸ್ತರವಾಗಿದ್ದು ರಾಜ್ಯದ ನಂಬರ್ ವನ್ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನರಕ ದರ್ಶನವಾಗುತ್ತಿದೆ. ದೊಡ್ಡ ದೊಡ್ಡ ಗುಂಡಿಗಳಿಗೆ ವಾಹನಗಳು ಬಿದ್ದು ಎದ್ದು, ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆಯೂ ರಸ್ತೆ ಮಧ್ಯೆ‌ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಲಾಗಿತ್ತು.