ಸುಳ್ಯ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ನಗರದ ರಕ್ಷಾ ಬಂಧನ ಕಾರ್ಯಕ್ರಮ ಆ. 19 ರಂದು ಸಂಜೆ 7 ಗಂಟೆಗೆ ಬೂಡು ಭಗವತಿ ದೇವಸ್ಥಾನ ಸುಳ್ಯದಲ್ಲಿ ನಡೆಯಿತು.
ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿಯವರು ಬೌದಿಕ್ ಮಾಡಿ ರಕ್ಷಾಬಂಧನದ ಮಹತ್ವವನ್ನು ಎಲ್ಲರಿಗೂ ತಿಳಿಸಿದರು. ನಂತರ ಎಲ್ಲರೂ ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ಸಿಹಿ ಹಂಚಿ ರಕ್ಷಾಬಂಧನ ಉತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಸುಳ್ಯ ನಗರದ ಅಧ್ಯಕ್ಷ ಉಪೇಂದ್ರ ನಾಯಕ್, ದೇವಿ ಪ್ರಸಾದ್ ಅತ್ಯಾಡಿ ಬಜರಂಗದಳ ನಗರ ಕಾರ್ಯದರ್ಶಿ, ವರ್ಶಿತ್ ಚೊಕ್ಕಾಡಿ ಸುಳ್ಯ ನಗರ ಸಂಯೋಜಕರು,ಮನೋಜು ಕುಮಾರ್ ನಗರ ಉಪಾಧ್ಯಕ್ಷರು, ರೂಪೇಶ್ ಪೂಜಾರಿ ಮನೆ ಬಜರಂಗದಳ ಜಿಲ್ಲಾ ಸಾಪ್ತಾಹಿಕಮಿಲನ್, ಲತಾ ರೈ ಬೂಡು ಸುಳ್ಯ ನಗರ ಮಾತೃ ಶಕ್ತಿ ಸಂಯೋಜಕಿ, ಪ್ರೀತಿಕಾ ಚೆಮ್ನೂರು ದುರ್ಗಾವಾಹಿನಿ ನಗರ ಸಂಯೋಜಕಿ ಉಪಸ್ಥಿತರಿದ್ದರು.
ಬಜರಂಗದಳದ ವಿವಿಧ ಜವಾಬ್ದಾರಿಯ ಕಾರ್ಯಕರ್ತರು ಹಾಗೂ ನಗರದ ಬಜರಂಗದಳದ ಕಾರ್ಯಕರ್ತರು ಹಾಗೂ ಮಾತೃ ಶಕ್ತಿ , ದುರ್ಗಾ ವಾಹಿನಿ ಸುಳ್ಯ ನಗರದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.