ಕಲ್ಲಪ್ಪಳ್ಳಿ: ಅಷ್ಟನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಆಚರಣೆ

ಕಲ್ಲಪ್ಪಳ್ಳಿ: ಇಲ್ಲಿನ ದೊಡ್ಡಮನೆಯ ಅಷ್ಟನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗತಂಬಿಲ ಹಾಗೂ ಕ್ಷೀರಾಭಿಷೇಕವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಪುರೋಹಿತ ವೆಂಕಟರಾಜ ಭಟ್ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಲ್ಲಪ್ಪಳ್ಳಿ- ದೊಡ್ಡಮನೆ ಮುಖ್ಯಸ್ಥರು, ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.