Sullia Samagra Samachara https://sullia.samagrasamachara.com Samagra Media Network Thu, 06 Aug 2026 10:27:15 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Sullia Samagra Samachara https://sullia.samagrasamachara.com 32 32 235500897 ಸಂಪಾಜೆ: ಕಾಡು ಪ್ರಾಣಿ ಹತ್ಯೆ ಮಾಡಿ ಮಾಂಸ ಮಾರಾಟ|ಇಬ್ಬರ ಬಂಧನ; ಓರ್ವ ಪರಾರಿ https://sullia.samagrasamachara.com/2026/08/06/news-one-324/ Thu, 06 Aug 2026 10:27:15 +0000 https://sullia.samagrasamachara.com/?p=72002 ಸಂಪಾಜೆ: ಇಲ್ಲಿನ ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ.

ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

]]>
72002
ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ. https://sullia.samagrasamachara.com/2026/08/06/news-one-323/ Thu, 06 Aug 2026 10:00:47 +0000 https://sullia.samagrasamachara.com/?p=71997 ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

]]>
71997
ಸುಳ್ಯ: ಮೆಸ್ಕಾಂ ಆಪರೇಟರ್ ಮೇಲೆ ಮೇಲಾಧಿಕಾರಿಯಿಂದ ಹಲ್ಲೆ ಪ್ರಕರಣ|ಎಫ್ ಐ ಆರ್ ದಾಖಲಿಸಲು ಭಯಗೊಂಡ ಸಿಬ್ಬಂದಿ| ಮೊಬೈಲ್ ಹಾನಿಗೊಳಿಸಿದ್ದಕ್ಕೆ ರೂ.10 ಸಾವಿರ ನೀಡಿದ ಸುಪ್ರೀತ್| ಮೇಲಾಧಿಕಾರಿಗಳಿಗೆ ದೂರು https://sullia.samagrasamachara.com/2026/08/06/news-one-322/ Thu, 06 Aug 2026 08:47:54 +0000 https://sullia.samagrasamachara.com/?p=71995 ಸಮಗ್ರ ನ್ಯೂಸ್: ಸುಳ್ಯದ ಮೆಸ್ಕಾಂ ಸಬ್ ಸ್ಟೇಷನ್ ನಲ್ಲಿ ಜಂಪರ್ ಕೊಡಲು ಲೈನ್ ಮ್ಯಾನ್ ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಎಇ ಸುಪ್ರೀತ್ ಅವರು ಲೈನ್ ಆಪ್ ಮಾಡಿಕೊಟ್ಟ ಸ್ಟೇಷನ್ ಆಪರೇಟರ್ ಗೆ ಹಲ್ಲೆ ನಡೆಸಿದ ಘಟನೆ ಆ. 2 ರಂದು ನಡೆದಿದ್ದು ಸುಳ್ಯ ಠಾಣೆ ಹಾಗೂ ಮೆಸ್ಕಾಂ ಮೇಲಾಧಿಕಾರಿಗಳಿಗೆ ದೂರು ಹೋದ ಬಗ್ಗೆ ವರದಿಯಾಗಿದೆ.

ಆ.02 ರಂದು ಕಲ್ಲುಗುಂಡಿ ಫೀಡರ್ ನ ಜಂಪರ್ ಕಟ್ ಆಗಿದ್ದು ದುರಸ್ತಿಗಾಗಿ ಲೈನ್ ಮ್ಯಾನ್ ಮಣಿಕಂಠ ಸಬ್ ಸ್ಟೇಷನ್ ಗೆ ಬಂದಿದ್ದು, ಕೆಲಸ ಮಾಡಲು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಅವರಿಗೆ ಕಲ್ಲುಗುಂಡಿ ಮತ್ತು ಇತರ ಫೀಡರ್ ಗಳನ್ನು ಲೈನ್ ಕ್ಲಿಯರೆನ್ಸ್ ( LC) ಮಾಡಿದ್ದರು. ನಂತರ ಮಣಿಕಂಠ ಅವರು ಕೆಲಸ ನಿರ್ವಹಿಸಿದ್ದರು.

ಮಧ್ಯಾಹ್ನ ವೇಳೆಗೆ ಕಛೇರಿಗೆ ಹೋದ ಎಇ ಸುಪ್ರೀತ್ ಅವರು ಎಲ್ ಸಿ ನೀಡಿದ ವಿಚಾರವಾಗಿ ಕೆಲಸ ಮಾಡಲು ವಿಳಂಬ ಮಾಡಿದ್ದಾರೆ, ಆಪರೇಟರ್ ರಾಘವ ಅವರು ಸಮರ್ಪಕ ಮಾಹಿತಿ ನೀಡಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು, ಮೊಬೈಲ್ ಒಡೆದು ಹಾಕಿ ತೆಗೆದುಕೊಂಡು ಹೋಗಿದ್ದಲ್ಲದೇ ದೈಹಿಕ ಹಲ್ಲೆ ನಡೆಸಿದರೆನ್ನಲಾಗಿದೆ.

ಎ.ಇ. ಸುಪ್ರೀತ್ ರು ಹಲ್ಲೆ ನಡೆಸಿದ ಪರಿಣಾಮ ರಾಘವರ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಬಳಿಕ ಪೋಲೀಸ್‌ ಠಾಣೆಗೆ ಹೋಗಿ ಇಂಜಿನಿಯರ್ ಸುಪ್ರೀತ್ ವಿರುದ್ಧ ದೂರು ನೀಡಿದರು.

ದೂರಿನ ಮೇರೆಗೆ ಎಇ ಸುಪ್ರೀತ್ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ಆರೋಪ ನಿರಾಕರಿಸಿ, ಸಾಕ್ಷಿ ಇದ್ದರೇ ತನ್ನಿ ಎಂದರೆನ್ನಲಾಗಿದೆ. ಕಛೇರಿಯಲ್ಲಿ ಸಿಸಿ ಟಿವಿ ಇಲ್ಲದೇ ಇರುವುದರಿಂದ ಸಾಕ್ಷಿ ಕೊರತೆ ಇರುವುದರಿಂದ ಕೇಸು ಖುಲಾಸೆಗೊಂಡರೇ ಎಇ ಯವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ ಎಂಬ ಭಯದಿಂದ ಎಫ್ ಐ ಆರ್ ದಾಖಲಿಸಲು ಹಿಂಜರಿದರೆನ್ನಲಾಗಿದೆ.

ಮೊಬೈಲ್ ನಲ್ಲಿ ಅಮೂಲ್ಯ ದಾಖಲೆಯ ಪೈಲ್ ಗಳಿವೆ ಅದು ಬೇಕು ಎಂದು ಪೋಲೀಸರ ಬಳಿ ಸಿಬ್ಬಂದಿ ಒತ್ತಾಯಿಸಿದ್ದರಿಂದ ‌ಮೊಬೈಲ್ ಹಾನಿಯಾಗಿರುವುದಕ್ಕೆ 10 ಸಾವಿರ ರೂ ಹಾಗೂ ಹುಡಿಯಾದ ಮೊಬೈಲನ್ನು ಪೋಲಿಸರು ಸುಪ್ರೀತ್ ಅವರಿಂದಲೇ ತರಿಸಿ ಸಿಬ್ಬಂದಿಗೆ ನೀಡಿ,‌ ಮುಂದೆನಾದರೂ ತೊಂದರೆ ಆದರೇ ನ್ಯಾಯಾಲಯದಿಂದ ಅನುಮತಿ ಪಡೆದು ಎಫ್ ಐ ಆರ್ ಮಾಡಿಸಬಹುದು ಎಂದು ಹಿಂಬರಹ ನೀಡಿ ಸಿಬ್ಬಂದಿಯನ್ನು ಕಳುಹಿಸಿದರೆನ್ನಲಾಗಿದೆ

ಘಟನೆ ಬಗ್ಗೆ ಮೆಸ್ಕಾಂ ಸಿಬ್ಬಂದಿ ರಾಘವ ಅವರನ್ನು ಸಂಪರ್ಕಿಸಿದಾಗ ಪ್ರಕರಣ ರಾಜಿಯಲ್ಲಿ ಮುಗಿಯಲಿಲ್ಲ. ಎಫ್ ಐ ಆರ್ ದಾಖಲಿಸಬೇಕಾದರೇ ನ್ಯಾಯಾಲಯದಿಂದ ಆದೇಶ ತರಬೇಕು ಇದೊಂದು ಅಸಂಜ್ಞೆಯ ಪ್ರಕರಣವಾಗಿದೆ ಎಂದು ಹಿಂಬರಹ ನೀಡಿ ಕಳುಹಿಸಿದ್ದಾರೆ ಎಂದರು.‌

ಆ.02 ರಂದು ನಾನು ಕರ್ತವ್ಯಕ್ಕೆ ಬರುವ ಮೊದಲೇ ಸಬ್ ಸ್ಟೇಷನ್ ನಲ್ಲಿ ಕಲ್ಲುಗುಂಡಿ ಪೀಡರ್ ನ ಜಂಪರ್ ಕಟ್ ಆಗಿತ್ತು. ಆ ಜಂಪರ್ ಕೊಡಲು ಲೈನ್ ಮ್ಯಾನ್ ಮಣಿಕಂಠ ಅವರು 7 ಪೀಡರ್ ಗಳು
ಲೈನ್ ಕ್ಲಿಯರೆನ್ಸ್ ( LC) ಬೇಕೆಂದು ಕೇಳಿದಾಗ ಸ್ಟೇಷನ್ ಜೆಇ ದಿವ್ಯ , ಎಇ ಸುಪ್ರೀತ್ ಅವರಿಗೆ ತಿಳಿಸಿ ಲೈನ್ ಆಫ್ ಮಾಡಿದ್ದೆ. ಲೈನ್ ಮ್ಯಾನ್ ಕೆಲಸ ವಿಳಂಬ ಮಾಡಿದ್ದಕ್ಕೆ ನನ್ನ ಮೇಲೆ ಕೋಪಗೊಂಡ ಎಇ ಸುಪ್ರೀತ್ ಅವರು ಅವಾಚ್ಯ ಶಬ್ದಗಳಿಂದ ಬೈದು, ಕಛೇರಿಗೆ ಬಂದು ಕಛೇರಿ ಮೊಬೈಲ್ ಮತ್ತು ನನ್ನ ಮೊಬೈಲ್ ಅನ್ನು ಒಡೆದು ಹಾಕಿ, ದೈಹಿಕ ಹಲ್ಲೆ ಮಾಡಿದ್ದಾರೆ. ಸುಪ್ರೀತ್ ಅವರು ಹಲ್ಲೆ ಮಾಡಿದ್ದರಿಂದ ನನ್ನ ಎಡ ಕಣ್ಣಿನ ಭಾಗಕ್ಕೆ ಗಾಯವಾಗಿ ರಕ್ತ ಸೋರಲಾರಂಭಿಸಿತು. ನಂತರ ಜೆಇ ದಿವ್ಯ ಅವರಿಗೆ ತಿಳಿಸಿ ಅವರು ಬಂದ ನಂತರ ನನ್ನನ್ನು ಸಹೋದ್ಯೋಗಿಗಳು ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದರು.

ಅಂದು ಸಂಜೆ ಸುಳ್ಯ ಠಾಣೆಯಲ್ಲಿ ದೂರು ನೀಡಿದೆ. ಠಾಣೆಯಲ್ಲಿ ಪೋಲೀಸರು ಎಇ ಯವರನ್ನು ಕರೆಸಿ ವಿಚಾರಿಸುವ ವೇಳೆ ಎಲ್ಲಾ ಆರೋಪಗಳನ್ನು ಮೊದಲು ನಿರಾಕರಿಸಿದರು. ಅಲ್ಲದೇ ಆರೋಪಗಳಿಗೆ ಸಾಕ್ಷಿ ತಂದು ತೋರಿಸಲಿ ಎಂದರು. ಎಫ್ ಐ ಆರ್ ಮಾಡಲಿ, ಕೇಸಲ್ಲಿ ನಾನು ಗೆಲ್ತೇನೆ. ಮತ್ತೆ ನಾನೇ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಎಂದರು. ಪೋಲೀಸರು ಕೊನೆಗೆ ಅವರಿಂದ ಒಡೆದ ಮೊಬೈಲ್, ಹಾಗೂ ನಷ್ಟ ಪರಿಹಾರವಾಗಿ 10 ಸಾವಿರ ತೆಗೆಸಿಕೊಟ್ಟರು. ಕೇಸು ಮುಂದುವರಿಸಿದರೂ ಸಾಕ್ಷಿಗಳ ಕೊರತೆಯಿಂದ ಹಲ್ಲೆ ಮಾಡಿದಕ್ಕೆ ನನಗೆ ಇಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲದಿರುವುದರಿಂದ ಎಫ್ ಐ ಅರ್ ಮಾಡಲು ಹಿಂಜರಿದೆ, ಮೊಬೈಲ್ ನಲ್ಲಿದ್ದ ಅಮೂಲ್ಯ ದಾಖಲೆಗಳು ಕಳೆದು ಹೋಗಿರುವುದು ಬೇಸರ ತಂದಿದೆ. ಕಛೇರಿಯಲ್ಲಿ ಇನ್ನೂ ಕರ್ತವ್ಯ ನಿರ್ವಹಿಸುವುದಕ್ಕೆ ಭಯ ಆರಂಭವಾಗಿದೆ. ಗುತ್ತಿಗೆ ಕಾರ್ಮಿಕರು ಎಂದು ತಾರತಮ್ಯ ಮಾಡುತ್ತಾರೆ. ಮುಂದೆ ಇಂತಹ ಕೃತ್ಯಗಳು ಆಗದಂತೆ ಸಂಬಂಧಪಟ್ಟವರು ಸೂಕ್ತ ರಕ್ಷಣೆ ನೀಡಬೇಕು, ಕಛೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

]]>
71995
ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ “ಸ್ವಸ್ಥ ಮಹಿಳೆ – ಸಮೃದ್ಧ ಭವಿಷ್ಯ” ಕಾರ್ಯಕ್ರಮ https://sullia.samagrasamachara.com/2026/08/05/news-one-321/ Wed, 05 Aug 2026 16:57:55 +0000 https://sullia.samagrasamachara.com/?p=71989 ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಸುಬ್ರಹ್ಮಣ್ಯದ ಮಹಿಳಾ ಸಬಲೀಕರಣ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇವುಗಳ ಸಹಯೋಗದೊಂದಿಗೆ ಆ.5 ಬುಧವಾರದಂದು ಮಹಿಳಾ ವಿದ್ಯಾರ್ಥಿನಿಯರಿಗಾಗಿ “ಸ್ವಸ್ಥ ಮಹಿಳೆ – ಸಮೃದ್ಧ ಭವಿಷ್ಯ” ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಲೀಲಾವತಿ ಪಂಜ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಆಗಮಿಸಿದ್ದರು. ಇವರು ವಿದ್ಯಾರ್ಥಿನಿಯರಿಗೆ ಪೌಷ್ಟಿಕ ಆಹಾರದ ಅಗತ್ಯತೆ, ಋತುಚಕ್ರದ ಸಮಸ್ಯೆಗಳು, ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ವಹಿಸಿದ್ದರು ಮತ್ತು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಹಿಳಾ ಸಬಲೀಕರಣ ಘಟಕದ ಸದಸ್ಯರಾದ ಶ್ರೀಮತಿ ಅಶ್ವಿನಿ ಎಸ್.ಎನ್. ಹಾಗೂ ಕುಮಾರಿ ಭಕ್ತಿ ಶ್ರೀ ಇವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ಕೃತಿಕಾ ಪಿ.ಎಸ್. ಅವರು ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಕುಮಾರಿ ದೇವಿಕ, ತೃತೀಯ B.Com ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮವನ್ನು ಕುಮಾರಿ ಸಂಖ್ಯಾ, ತೃತೀಯ B.A ಮತ್ತು ಕುಮಾರಿ ವರ್ಷಿಣಿ ಕೆ, ದ್ವಿತೀಯ B.A ನಿರೂಪಿಸಿದರು.

]]>
71989
ಕೊಲ್ಲಮೊಗ್ರು : ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ವತಿಯಿಂದ ಜು.25ರಂದು ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ  ಹಾಗೂ ಶಾಲಾ ವಠಾರ ಸ್ವಚ್ಚತಾ ಕಾರ್ಯಕ್ರಮ  https://sullia.samagrasamachara.com/2026/08/03/news-one-320/ Mon, 03 Aug 2026 04:37:13 +0000 https://sullia.samagrasamachara.com/?p=71986 ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ ಹಾಗೂ ಶಾಲಾ ಸುತ್ತಲಿನ ಪರಿಸರದ ಸ್ವಚ್ಛತಾ ಕಾರ್ಯವನ್ನು ಕೊಲ್ಲಮೊಗ್ರು ಚೈತನ್ಯ ಯುವತಿ ಮಂಡಲದ ವತಿಯಿಂದ ಜು.25 ರಂದು ನಡೆಸಲಾಯಿತು.

ಮಂಡಲದ ಪದಾಧಿಕಾರಿಗಳಾದ ಶ್ರೀಮತಿ ನೀಲಾವತಿ ತಂಬಿನಡ್ಕ, ಶ್ರೀಮತಿ ರೀತಾ ಪಡಿಕಲ್ಲು, ಶ್ರೀಮತಿ ಸುನಂದ ಗಡಿಕಲ್ಲು, ಶ್ರೀಮತಿ ತಾರಾ ಕಲ್ಕೂದಿ, ಶ್ರೀಮತಿ ಲತಾ ಕುಮಾರಿ ತಂಬಿನಡ್ಕ ನೇತೃತ್ವದಲ್ಲಿ ನಡೆಯಿತು.

ಮಳೆಯ ಕಾರಣ ಶಾಲೆಗೆ ರಜೆಯಿದ್ದರೂ ಉಪಹಾರ ವ್ಯವಸ್ಥೆಗೆ ಅಕ್ಷರ ದಾಸೋಹ ಸಿಬ್ಬಂದಿಯಾದ ಶ್ರೀಮತಿ ದಿವ್ಯಾಕುಮಾರಿ ಸಹಕರಿಸಿದರು 

ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಕೆ.ಪಿ, ಸಹಶಿಕ್ಷಕರಾಗಿರುವ, ಲೋಕನಾಥ, ರಾಜೇಶ್, ಚಂದ್ರು  ಇವರುಗಳು ಉಪಸ್ಥಿತರಿದ್ದರು.

]]>
71986
ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ https://sullia.samagrasamachara.com/2026/08/03/news-one-319/ Mon, 03 Aug 2026 04:27:55 +0000 https://sullia.samagrasamachara.com/?p=71983 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯ, ಕಲ್ಲಾಜೆ ಮತ್ತು ಕುಲ್ಕುಂದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆ.2 ರಂದು ನಡೆಸಲಾಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರ ಅಧ್ಯಕ್ಷತೆ ಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು  ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ ಸ್ಕಂದರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು .

ಈ ಸಮಾರಂಭದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ನೆರವೇರಿಸಿ ಮಾತನಾಡುತ್ತ, ಕಾರ್ಯಕ್ರಮವನ್ನು ಸಂಭ್ರಮಿಸುತ್ತಿರುವ ಈ ಪದಗ್ರಹಣ ಸಮಾರಂಭದ ಹಿಂದಿರುವ ಆಶಯ ಮತ್ತು ಶಕ್ತಿ ನಿಜಕ್ಕೂ ಅಪಾರವಾದದು. ಪರಮಾಪೂಜ್ಯ ಡಾ | ಡಿ. ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾದ ಈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕೋಟ್ಯಂತರ ಗ್ರಾಮೀಣ ಕುಟುಂಬಗಳ ಬದುಕಿಗೆ ಬೆಳಕಾಗಿದೆ. ಪ್ರಗತಿ ಬಂಧು ಎಂಬುದು ಶ್ರಮದಾನ ಮತ್ತು ಪರಸ್ಪರ ಸಹಕಾರದ ಮೂಲಕ ಕೃಷಿಕರ ಶ್ರಮವನ್ನು ಹಸನುಗೊಳಿಸಿದ ಅಪೂರ್ವ ಮಾದರಿಯಾಗಿದೆ. ಸಣ್ಣ ಉಳಿತಾಯದಿಂದ ತೊಡಗಿ ಇಂದಿನ ಜ್ಞಾನ ವಿಕಾಸದವರೆಗೆ ಗ್ರಾಮೀಣ ಮಹಿಳೆಯಾರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ಭದ್ರತೆಯನ್ನು ನೀಡಿದೆ. ಗ್ರಾಮ ಮಟ್ಟದ ಸ್ವಸಹಾಯ ಸಂಘಗಳು ಒಕ್ಕೂಟಗಳಾಗಿ ರೂಪುಗೊಂಡು ಇಂದು ನಾಯಕತ್ವ ಬೆಳೆಸುವ ದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯುತ್ತವಾಗಿ ಮುಂದುವರಿಸಿ ಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಸುಬ್ರಹ್ಮಣ್ಯ ವಲಯದ ತಾಲೂಕು ಭಜನೋತ್ಸವ ಸಮಿತಿ 2026 ರ ಅಧ್ಯಕ್ಷರಾದ ಡಾ | ರವಿ ಕಕ್ಕೆಪದವುರವರು, ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಸತೀಶ್ ಟಿ ಎನ್ ರವರು, ಸುಬ್ರಹ್ಮಣ್ಯ ವಲಯದ ಭಜನಾ ಪರಿಷತ್ ನ ವಲಯ ಅಧ್ಯಕ್ಷರಾದ ಚಂದ್ರಶೇಖರ ಕೊಂದಳರವರು, ಸುಬ್ರಹ್ಮಣ್ಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ದಿನೇಶ್ ರವರು, ಕಲ್ಲಾಜೆ ಒಕ್ಕೂಟದ ಅಧ್ಯಕ್ಷರಾದ ಮೋನಪ್ಪ ಗೌಡರವರು, ಕುಲ್ಕುಂದ ಒಕ್ಕೂಟದ ಅಧ್ಯಕ್ಷರಾದ ಹರಿಪ್ರಸಾದ್ ರವರು, ಸುಬ್ರಹ್ಮಣ್ಯ ಒಕ್ಕೂಟದ ನೂತನ ಅಧ್ಯಕ್ಷರಾದ ಶ್ರೀಮತಿ ರತ್ನಾವತಿರವರು, ಕುಲ್ಕುಂದ ಒಕ್ಕೂಟದ ನೂತನ ಒಕ್ಕೂಟದ ಅಧ್ಯಕ್ಷರಾದ ರವಿಚಂದ್ರರವರು ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಕುಲ್ಕುಂದ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿಣಾಕ್ಷಿರವರು ಸಾಧನೆಯ ವರದಿ ಮಂಡನೆ ಮಾಡಿದರು. ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರವನ್ನು ಮತ್ತು ನೂತನ ಒಕ್ಕೂಟದ ಕಾರ್ಯದರ್ಶಿಗಳಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು. ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು, ವಲಯದ ಭಜನಾ ಪರಿಷತ್ ನ ಪದಾಧಿಕಾರಿಗಳನ್ನು, ನವಜೀವನ ಸಮಿತಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಸುಬ್ರಹ್ಮಣ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಶೈಲಜಾರವರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಎಲ್ಲಾ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಯೋಜನೆಯ ಎಲ್ಲಾ ಹಿತೈಷಿ ಬಂಧುಗಳು ಭಾಗವಹಿಸಿದರು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು, ಶ್ರದ್ದಾ ಸಂಘದ ಸದಸ್ಯರಾದ ಶ್ರೀಮತಿ ಜಯಶ್ರೀರವರು ಧನ್ಯವಾದವಿತ್ತರು. ಸುಬ್ರಹ್ಮಣ್ಯ ಒಕ್ಕೂಟದ ನಿಕಟ ಪೂರ್ವ ಉಪಾಧ್ಯಕ್ಷರಾದ ರಾಮಚಂದ್ರರವರು ಕಾರ್ಯಕ್ರಮ ನಿರೂಪಿಸಿದರು.

]]>
71983
ಪೆರಾಜೆ: ಮಾದವ ಪೆರುಮುಂಡ ಅಸೌಖ್ಯದಿಂದ ನಿಧನ  https://sullia.samagrasamachara.com/2026/07/30/news-one-318/ Thu, 30 Jul 2026 02:17:04 +0000 https://sullia.samagrasamachara.com/?p=71979 ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಪಿ. ಯಂ  ಮಾದವ ಅವರು ಅಸೌಖ್ಯದಿಂದ ಬುಧವಾರ ನಿಧನರಾದರು.

ಅವರಿಗೆ  73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಯತೀಶ, ಮೂವರು ಪುತ್ರಿಯರನ್ನು , ಅಳಿಯಂದಿರನ್ನು ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

]]>
71979
ಸುಬ್ರಮಣ್ಯ: ಕೆ .ಎಸ್.ಎಸ್ ಕಾಲೇಜಿನಲ್ಲಿ ಮಾದಕ ದ್ರವ್ಯ,ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಬಗ್ಗೆ ಅರಿವು ಕಾರ್ಯಕ್ರಮ https://sullia.samagrasamachara.com/2026/07/26/news-one-317/ Sun, 26 Jul 2026 09:49:06 +0000 https://sullia.samagrasamachara.com/?p=71976 ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಆ್ಯಂಟಿ ಡ್ರಗ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕವು ಜಂಟಿಯಾಗಿ ಜು.24 ರಂದು ಮಾದಕ ದ್ರವ್ಯ, ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಬಾಬುರೆಡ್ಡಿ ಆಗಮಿಸಿದ್ದರು, ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ, ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಯಾದ ಆಂಜನೇಯ ರೆಡ್ಡಿ ಉಪಸ್ಥಿತರಿದ್ದರು. ಆ್ಯಂಟಿ ಡ್ರಗ್ ಘಟಕ ಸಂಯೋಜಕರಾದ ಶ್ರೀ ಮನೋಹರ್ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಸುಮಿತ್ರ ವಂದಿಸಿದರು, ಶ್ರೀಮತಿ ಆರತಿ ಕಾರ್ಯಕ್ರಮ ನಿರೂಪಿಸಿದರು.

]]>
71976
ಸುಬ್ರಮಣ್ಯ: ಭಾರತೀಯ ಮಜ್ದೂರ್ ಸಂಘ (BMS ) ಸ್ಥಾಪನ ದಿನಾಚರಣೆ ಜು .23 ರಂದು ಆಚರಣೆ  https://sullia.samagrasamachara.com/2026/07/23/news-one-316/ Thu, 23 Jul 2026 14:41:14 +0000 https://sullia.samagrasamachara.com/?p=71973 ಭಾರತೀಯ ಮಜ್ದೂರ್ ಸಂಘ (BMS ) ಸ್ಥಾಪನ ದಿನಾಚರಣೆಯನ್ನು ಸುಬ್ರಮಣ್ಯ ಘಟಕದಲ್ಲಿ ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಮಾತೆಯ ಭಾವಚಿತ್ರಕೆ ಪುಷ್ಪರ್ಚನೆ ಮಾಡುವ ಮೂಲಕ ಜು.23 ರಂದು ಆಚರಿಸಲಾಯಿತು.

ಬಿ. ಎಮ್. ಎಸ್ ಎಂದರೇನು ಮತ್ತು ನಮಗೆ ಏಕೆ ಈ ಸಂಘಟನೆ  ಬೇಕು ಎಬುದನ್ನು ಸಂಘದ ಮಾಜಿ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ ರವರು ಸಭೆಯಲ್ಲಿ ಸೇರಿದ ಸದಸ್ಯರುಗಳಿಗೆ ತಿಳಿಸಿದರು.

 ನಂತರ ಎಲ್ಲಾ ಸದಸ್ಯರುಗಳಿಗೆ ಸಿಹಿ ತಿಂಡಿ ಹಂಚಿ ಸಂಘದ ಸ್ಥಾಪನ ದಿನಾಚರಣೆಯನ್ನು ಸಂಭ್ರಮಿಸಲಾಯಿತು .

]]>
71973
ಕಾರು – ಬೈಕ್ ನಡುವೆ ಅಪಘಾತ; ಸವಾರ ಸಾವು https://sullia.samagrasamachara.com/2026/07/23/aranthodu-accident-news/ Thu, 23 Jul 2026 12:54:55 +0000 https://sullia.samagrasamachara.com/?p=71969 ಸುಳ್ಯ: ಇಲ್ಲಿನ ಅರಂತೋಡು ಕುಲ್ಚಾರ್ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಗಂಭೀರ ಗಾಯಗೊಂಡು ಮೃತಪಟ್ಟ ಬೈಕ್ ಸವಾರ ವಿದ್ಯಾರ್ಥಿಯನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ (17 ವರ್ಷ) ಎಂದು ಗುರುತಿಸಲಾಗಿದೆ.

ಸಂತೋಷ್ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದರು. ಇಲ್ಲಿನ ಕುಲ್ಚಾರ್ ಸಮೀಪ ಬೈಕ್ ಮತ್ತು ಕಾರು ನಡುವೆ ಬುಧವಾರ ದಂದು ರಾತ್ರಿ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸಂತೋಷ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಾಯಾಳುವನ್ನು‌ ಶರತ್ ಅಡ್ಯಡ್ಕ ಅವರು ಸ್ಥಳೀಯರ ಸಹಕಾರದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದರು.

]]>
71969