Yenmooru Archives - Sullia Samagra Samachara https://sullia.samagrasamachara.com/category/sullia/yenmooru/ Samagra Media Network Mon, 14 Apr 2025 15:34:02 +0000 en-US hourly 1 https://wordpress.org/?v=7.1.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Yenmooru Archives - Sullia Samagra Samachara https://sullia.samagrasamachara.com/category/sullia/yenmooru/ 32 32 235500897 ಎಣ್ಮೂರು: ಆದಿಗರಡಿಯಲ್ಲಿ ಬ್ರಹ್ಮಬೈದರ್ಕಳ ನೇಮೋತ್ಸವ ಸಂಪನ್ನ https://sullia.samagrasamachara.com/2025/04/14/brahma-baider-nema-sampanna/ Mon, 14 Apr 2025 15:34:02 +0000 https://sullia.samagrasamachara.com/?p=71095 The post ಎಣ್ಮೂರು: ಆದಿಗರಡಿಯಲ್ಲಿ ಬ್ರಹ್ಮಬೈದರ್ಕಳ ನೇಮೋತ್ಸವ ಸಂಪನ್ನ appeared first on Sullia Samagra Samachara.

]]>
ನಿಂತಿಕಲ್ಲು: ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ಗರಡಿಯಲ್ಲಿ ಆದಿ ಬೈದೇರುಗಳ ನೇಮೋತ್ಸವ ನಡೆಯಿತು. ಭಕ್ತರು ಬೈದೇರುಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ನೇಮೋತ್ಸವದ ನಿಮಿತ್ತ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಮಹಾ ಅನ್ನಸಂತರ್ಪಣೆ ನೆರವೇರಿತು.

ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು, ನೇತ್ರಾದಿ ಗರಡಿಯಲ್ಲಿ ದರ್ಶನ ನಡೆಯಿತು. ಬೈದೆರುಗಳು ಗರಡಿ ಇಳಿಯುವ ಕಾರ್ಯ, ಗರಡಿಯಲ್ಲಿ ನರ್ತನ ಸೇವೆ, ರಂಗಸ್ಥಳದಲ್ಲಿ ನರ್ತನ ಸೇವೆ, ಕಿನ್ನಿದಾರು ಗರಡಿ ಇಳಿಯುವ ಕಾರ್ಯ, ರಂಗಪ್ರವೇಶ ಮಾಡಿ ಕಿನ್ನಿದಾರುವಿನ ನರ್ತನ ಸೇವೆ, ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ತೆರಳಿ ಬೀಡಿಗೆ ಕಾಣಿಕೆ ಅರ್ಪಿಸಿ ಗರಡಿಗೆ ಮರಳಿದ ಬೈದೇರುಗಳು ನರ್ತನ ಸೇವೆ ನೆರವೇರಿಸಿದರು.

ಬಳಿಕ ರಂಗಸ್ಥಳದಲ್ಲಿ ಕೋಟಿ ಚೆನ್ನಯರ ದರ್ಶನ ನೆರವೇರಿತು. ನಂತರ ಬೈದೇರುಗಳಲ್ಲಿ ಅರಿಕೆ ಮಾಡಿಕೊಂಡು ಭಕ್ತರು ಗಂಧಪ್ರಸಾದ ಸ್ವೀಕರಿಸಿದರು. ಬಳಿಕ ತುಲಾಭಾರ ನೆರವೇರಿತು. ಗರಡಿಯ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಕಟ್ಟಬೀಡು ಮನೆತನದವರು, ಭಕ್ತರು ಭಾಗವಹಿಸಿದ್ದರು.

The post ಎಣ್ಮೂರು: ಆದಿಗರಡಿಯಲ್ಲಿ ಬ್ರಹ್ಮಬೈದರ್ಕಳ ನೇಮೋತ್ಸವ ಸಂಪನ್ನ appeared first on Sullia Samagra Samachara.

]]>
71095
ನಿಡ್ವಾಳ: ಶ್ರೀ ಮಹಾವಿಷ್ಣು ದೇವಾಸ್ಥಾನಕ್ಕೆ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ |ದೇಗುಲದ ಅಭಿವೃದ್ಧಿಗೆ ಅನುದಾನ ಒದಗಿಸಲು ಮನವಿ https://sullia.samagrasamachara.com/2024/09/11/visit-mla-bhagirathi-murulya/ Wed, 11 Sep 2024 17:22:36 +0000 https://sullia.samagrasamachara.com/?p=69921 The post ನಿಡ್ವಾಳ: ಶ್ರೀ ಮಹಾವಿಷ್ಣು ದೇವಾಸ್ಥಾನಕ್ಕೆ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ |ದೇಗುಲದ ಅಭಿವೃದ್ಧಿಗೆ ಅನುದಾನ ಒದಗಿಸಲು ಮನವಿ appeared first on Sullia Samagra Samachara.

]]>
ನಿಡ್ವಾಳ: ಶ್ರೀ ಮಹಾವಿಷ್ಣು ದೇವಾಸ್ಥಾನಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ ಸೆ.10ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರು ದೇಗುಲದ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಒದಗಿಸಿ ಕೊಡಬೇಕೆಂದು ಮನವಿ ಪತ್ರವನ್ನು ನೀಡಿ ವಿನಂತಿಸಿದರು.

The post ನಿಡ್ವಾಳ: ಶ್ರೀ ಮಹಾವಿಷ್ಣು ದೇವಾಸ್ಥಾನಕ್ಕೆ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ |ದೇಗುಲದ ಅಭಿವೃದ್ಧಿಗೆ ಅನುದಾನ ಒದಗಿಸಲು ಮನವಿ appeared first on Sullia Samagra Samachara.

]]>
69921
ಕರಿಕ್ಕಳ: ಶಾಸಕಿ ಭಾಗೀರಥಿ ಮುರುಳ್ಯರಿಂದ ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಬಿಡುಗಡೆ https://sullia.samagrasamachara.com/2024/09/11/karikkala-2/ Wed, 11 Sep 2024 02:18:34 +0000 https://sullia.samagrasamachara.com/?p=69901 The post ಕರಿಕ್ಕಳ: ಶಾಸಕಿ ಭಾಗೀರಥಿ ಮುರುಳ್ಯರಿಂದ ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಬಿಡುಗಡೆ appeared first on Sullia Samagra Samachara.

]]>
ಕರಿಕ್ಕಳ: ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಅನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯರಾದ ಡಾ. ರಾಮಯ್ಯ ಭಟ್, ಶಿವರಾಮಯ್ಯ, ಚಂದ್ರಶೇಖರ ಶಾಸ್ತ್ರಿ, ದಯಾನಂದ ಮೇಲ್ಮನೆ, ಲೋಕೇಶ್ ಬರೆಮೇಲು, ಕಾರ್ಯಪ್ಪ ಗೌಡ ಚಿದ್ಗಲ್, ಲಿಗೋಧರ ಆಚಾರ್ಯ, ನಾರಾಯಣ ಕೃಷ್ಣ ನಗರ, ವಿಜಯಲಕ್ಷ್ಮಿ ಜಳಕದ ಹೊಳೆ, ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘದ ಅಧ್ಯಕ್ಷ ಲತೀಶ್ ಅಲೆಂಗಾರ, ಕಾರ್ಯದರ್ಶಿ ಪವನ್ ಅತ್ಯಡ್ಕ ಹಾಗೂ ವಿಷ್ಣು ಸೇವಾ ಶಕ್ತಿ ಸಂಘದ ಸದಸ್ಯರುಗಳು ಮತ್ತು ಊರವರು ಉಪಸ್ಥಿತರಿದ್ದರು.

The post ಕರಿಕ್ಕಳ: ಶಾಸಕಿ ಭಾಗೀರಥಿ ಮುರುಳ್ಯರಿಂದ ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಬಿಡುಗಡೆ appeared first on Sullia Samagra Samachara.

]]>
69901
ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ|ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ,  ಹಿರಿಯರ ವಿಭಾಗದಲ್ಲಿ ತೃತೀಯ ಸಮಗ್ರ https://sullia.samagrasamachara.com/2024/08/24/yenmooru/ Sat, 24 Aug 2024 13:33:19 +0000 https://sullia.samagrasamachara.com/?p=69706 The post ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ|ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ,  ಹಿರಿಯರ ವಿಭಾಗದಲ್ಲಿ ತೃತೀಯ ಸಮಗ್ರ appeared first on Sullia Samagra Samachara.

]]>
ಎಣ್ಮೂರು; ಆ. 23: ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಮತ್ತು ಹಿರಿಯ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ  ಮಡಿಲಿಗೇರಿಸಿಕೊಂಡಿತು.

ಎಡಮಂಗಲ ಸ.ಹಿ.ಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಕ್ರಾರ್ಯಕ್ರಮದಲ್ಲಿ
ಹಿರಿಯ ವಿಭಾಗದ ಅಶುಭಾಷಣ ಸ್ಪರ್ಧೆಯಲ್ಲಿ ದಿಶಾ ಡಿಂಪಲ್ ಪ್ರಥಮ, ಅಭಿನಯ ಗೀತೆಯಲ್ಲಿ ತೃಪ್ತಿ ಎನ್.ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಮಹಮ್ಮದ್ ಇನಾಜ್ ಪ್ರಥಮ, ಹಿಂದಿ ಕಂಠಪಾಠ ಸೋವಿತ್ ತೃತೀಯ, ಪ್ರಬಂಧ ಸ್ಪರ್ಧೆಯಲ್ಲಿ  ನಿರೀಕ್ಷಾ ಪಿ. ತೃತೀಯ, ಕವನವಾಚನ ಸ್ಪರ್ಧೆಯಲ್ಲಿ ತೃತೀಯ, ಅಶ್ಮಿತ ಭಕ್ತಿಗೀತೆ  ತೃತೀಯ ಸಹನ್ಯ, ದೇಶಭಕ್ತಿಗೀತೆ  ಸಹನ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಿರಿಯ ವಿಭಾಗದಲ್ಲಿ ಅರೇಬಿಕ್ ಧಾರ್ಮಿಕ ಪಠಣ ಝೋಯಾ ಫಾತಿಮಾ ಪ್ರಥಮ, ಕನ್ನಡ ಕಂಠಪಾಠ  ಝೂಯಾ ಫಾತಿಮಾ ದ್ವಿತೀಯ, ಇಂಗ್ಲಿಷ್ ಕಂಠಪಾಠ ಮಹಮ್ಮದ್ ಸುಹೈಲ್ ದ್ವಿತೀಯ, ಕ್ಲೇ ಮಾಡೆಲಿಂಗ್ ನಲ್ಲಿ ಅವಿತೇಜ ದ್ವಿತೀಯ, ಛದ್ಮವೇಷದಲ್ಲಿ ಹಿಮಾಂತ  ಹೆಚ್. ತೃತೀಯ, ಭಕ್ತಿಗೀತೆ ಚರಿಷ್ಮಾ ತೃತೀಯ, ಕಥೆ ಹೇಳುವುದರಲ್ಲಿ ಧನ್ವಿ ಹೆಚ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

The post ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ|ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ,  ಹಿರಿಯರ ವಿಭಾಗದಲ್ಲಿ ತೃತೀಯ ಸಮಗ್ರ appeared first on Sullia Samagra Samachara.

]]>
69706
ಕರಿಕ್ಕಳ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ವಿಷ್ಣುಸೇವಾ ಶಕ್ತಿ ನಿಡ್ವಾಳ’ ಸಂಘಟನೆಯಿಂದ ಶ್ರಮದಾನ https://sullia.samagrasamachara.com/2024/08/16/karikkala/ Fri, 16 Aug 2024 02:32:44 +0000 https://sullia.samagrasamachara.com/?p=69631 The post ಕರಿಕ್ಕಳ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ವಿಷ್ಣುಸೇವಾ ಶಕ್ತಿ ನಿಡ್ವಾಳ’ ಸಂಘಟನೆಯಿಂದ ಶ್ರಮದಾನ appeared first on Sullia Samagra Samachara.

]]>
ಕರಿಕ್ಕಳ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ವಿಷ್ಣುಸೇವಾ ಶಕ್ತಿ ನಿಡ್ವಾಳ ‘ ಸಂಘಟನೆಯವರು ಆ. 15 ರಂದು ಶ್ರಮದಾನ ಮಾಡಿದರು.

ನಿಡ್ವಾಳ ದಿಂದ ಅಲೆಂಗಾರ, ಮೇಲ್ಪಾಡಿ, ಅತ್ಯಡ್ಕಕ್ಕೆ ಸಂಪರ್ಕಿಸುವ ರಸ್ತೆಯನ್ನು ಸ್ವಚ್ಛ ಮತ್ತು ದುರಸ್ತಿಗೊಳಿಸಿದರು.

The post ಕರಿಕ್ಕಳ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ವಿಷ್ಣುಸೇವಾ ಶಕ್ತಿ ನಿಡ್ವಾಳ’ ಸಂಘಟನೆಯಿಂದ ಶ್ರಮದಾನ appeared first on Sullia Samagra Samachara.

]]>
69631