Ubaradka Mittur – Sullia Samagra Samachara https://sullia.samagrasamachara.com Samagra Media Network Tue, 19 Nov 2024 12:44:29 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Ubaradka Mittur – Sullia Samagra Samachara https://sullia.samagrasamachara.com 32 32 235500897 ಉಬರಡ್ಕ: ಯುವತಿ ಆತ್ಮಹತ್ಯೆ https://sullia.samagrasamachara.com/2024/11/19/suicide-2/ Tue, 19 Nov 2024 12:44:29 +0000 https://sullia.samagrasamachara.com/?p=70432 ಉಬರಡ್ಕ: ಇಲ್ಲಿನ ಕುತ್ತಮೊಟ್ಟೆ ನಿವಾಸಿ ಮೀನಾಕ್ಷಿ ಎಂಬವರ ಪುತ್ರಿ 23 ವರ್ಷದ ನಮಿತಾ ಎಂಬ ಯುವತಿ ನ. 19ರ ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತರು ತಾಯಿ ಓರ್ವ ಸಹೋದರ ನಂದನ್ ರವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬರಬೇಕಿದೆ.

]]>
70432
ಆ.22: ಸುಳ್ಯದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ https://sullia.samagrasamachara.com/2024/08/21/electrical-variation/ Wed, 21 Aug 2024 13:16:05 +0000 https://sullia.samagrasamachara.com/?p=69677 ಸುಳ್ಯ: ಆ.22 ಗುರುವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಮೆಸ್ಕಾಂ ಹಮ್ಮಿಕೊಂಡಿದೆ.

ಈ ಹಿನ್ನಲೆಯಲ್ಲಿ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಮತ್ತು ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

]]>
69677
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ https://sullia.samagrasamachara.com/2024/08/14/ubaradka-mitturu/ Wed, 14 Aug 2024 16:43:13 +0000 https://sullia.samagrasamachara.com/?p=69591 ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯು ಆ.14 ರಂದು ಮಂಗಳೂರಿನಲ್ಲಿ ನಡೆಯಿತು.

ಈ ಸಭೆಯಲ್ಲಿ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವರ ಸೇವೆಯನ್ನು ಪರಿಗಣಿಸಿ ‘ಅತ್ಯುತ್ತಮ ಸಹಕಾರ ಸಂಘ’ ಎಂಬ ಪ್ರಶಸ್ತಿ ದೊರಕಿದೆ.

ಉಬರಡ್ಕ ಮಿತ್ತೂರು ಪ್ರಾ. ಕೃ. ಪ. ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಪ್ರಶಸ್ತಿ ಸ್ವೀಕರಿಸಿದರು. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಸಂಘದ ನಿರ್ದೇಶಕರಾದ ಪಿ.ಎಸ್‌.ಗಂಗಾಧರ, ಹರಿಪ್ರಸಾದ್ ಪಾನತ್ತಿಲ, ಸಹಕಾರಿ ಸಂಘದ ಸಿಬ್ಬಂದಿ ಗುರುವ ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್. ಮನ್ಮಥ, ಶಶಿಕುಮಾ‌ರ್ ಬಾಲ್ಯೊಟು, ಮತ್ತಿತರರು ಉಪಸ್ಥಿತರಿದ್ದರು.

]]>
69591