Thodikana – Sullia Samagra Samachara https://sullia.samagrasamachara.com Samagra Media Network Fri, 30 Aug 2024 06:51:52 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Thodikana – Sullia Samagra Samachara https://sullia.samagrasamachara.com 32 32 235500897 ಅರಂತೋಡು: ಕೃಷಿಯ ಸಮಗ್ರ ಬೆಳೆ ನಿರ್ವಹಣೆಯ ಕುರಿತು ಮಾಹಿತಿ ಮಂಥನ| ಉಚಿತ ನೇತ್ರ ತಪಾಸಣಾ ಶಿಬಿರ https://sullia.samagrasamachara.com/2024/08/30/information-churn/ Fri, 30 Aug 2024 06:51:52 +0000 https://sullia.samagrasamachara.com/?p=69789 ಅರಂತೋಡು: ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯತ್ ಅರಂತೋಡು, ಪ್ರಸಾದ್ ನೇತ್ರಾಲಯ ಸೂಪ‌ರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಕೃಷಿಯ ಸಮಗ್ರ ಬೆಳೆ ನಿರ್ವಹಣೆಯ ಕುರಿತು ಮಾಹಿತಿ ಮಂಥನ ಕಾರ್ಯಕ್ರಮ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ಆ. 29ರಂದು ಅರಂತೋಡು ಸಹಕಾರಿ ಸಂಘದ “ಸಿರಿ ಸೌಧ ” ಸಭಾಂಗಣದಲ್ಲಿ ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆಯವರು ನೆರವೇರಿಸಿದರು.

ಅರಂತೋಡು ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಪಂಚಾಯತ್ ಉಪಾಧ್ಯಕ್ಷ ಭವಾನಿ ಚಿಟ್ಟನ್ನೂರು, ಇಂದೋರ್ ನ ಶ್ರೀ ಸಿದ್ದಿ ಎಗ್ರಿ ಕಂ ಪ್ರೈವೇಟ್ ಲಿಮಿಟೆಡ್ ನ ಪೆರುವೋಡಿ ನಾರಾಯಣ ಭಟ್, ಇನ್ನ‌ರ್ ವೀಲ್‌ ಕ್ಲಬ್ ಅಧ್ಯಕ್ಷ ಚಿಂತನಾ ಸುಬ್ರಹ್ಮಣ್ಯ, ಪ್ರಗತಿಪರ ಕೃಷಿಕರಾದ ಶ್ರೀನಿವಾಸ ನಿಡಿಂಜಿ, ಜೇಟ್ಲಿ ಶ್ರೀಧರ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಯೋಗಿತಾ ಗೋಪಿನಾಥ್ ಮತ್ತು ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ. ಅಹನಾ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು, ಪಂಚಾಯತ್ ಸದಸ್ಯರುಗಳು, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಸದಸ್ಯರು ಮತ್ತು ಪದಾಧಿಕಾರಿಗಳು, ಅರಂತೋಡು -ತೊಡಿಕಾನ ಅವಳಿ ಗ್ರಾಮಗಳ ಗ್ರಾಮಸ್ಥರಲ್ಲದೆ ನೆರೆಯ ಗ್ರಾಮಗಳ ಸಾರ್ವಜನಿಕರು ಭಾಗಿಯಾದರು.

ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ನಯನಕುಮಾರ್ ಕಿರ್ಲಾಯ ವಂದಿಸಿದರು.
ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್.ಆ‌ರ್. ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ನಂತರ ಸಹಕಾರಿ ಸಂಘದ ಸಭಾಂಗಣದಲ್ಲಿ ಕೃಷಿಯ ಮಾಹಿತಿ ಕಾರ್ಯಕ್ರಮ ಮತ್ತು ಪಂಚಾಯತ್ ಸಭಾಂಗಣದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಿತು.

]]>
69789
ತೊಡಿಕಾನ: ನೇಣು ಬಿಗಿದು ಆತ್ಮಹತ್ಯೆಗೆ ಶರಣು https://sullia.samagrasamachara.com/2024/08/27/suicide/ Tue, 27 Aug 2024 05:01:38 +0000 https://sullia.samagrasamachara.com/?p=69745 ಸಮಗ್ರ ನ್ಯೂಸ್: ತೊಡಿಕಾನ ಗ್ರಾಮದ ಹರ್ಲಡ್ಕದ ರುಕ್ಮಯ್ಯ ಎಂಬವರು ಇಂದು ಮುಂಜಾನೆ (ಆ.27) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ 55ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

]]>
69745
ಆ.22: ಸುಳ್ಯದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ https://sullia.samagrasamachara.com/2024/08/21/electrical-variation/ Wed, 21 Aug 2024 13:16:05 +0000 https://sullia.samagrasamachara.com/?p=69677 ಸುಳ್ಯ: ಆ.22 ಗುರುವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಮೆಸ್ಕಾಂ ಹಮ್ಮಿಕೊಂಡಿದೆ.

ಈ ಹಿನ್ನಲೆಯಲ್ಲಿ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಮತ್ತು ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

]]>
69677