Sampaje – Sullia Samagra Samachara https://sullia.samagrasamachara.com Samagra Media Network Thu, 06 Aug 2026 10:00:47 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Sampaje – Sullia Samagra Samachara https://sullia.samagrasamachara.com 32 32 235500897 ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ. https://sullia.samagrasamachara.com/2026/08/06/news-one-323/ Thu, 06 Aug 2026 10:00:47 +0000 https://sullia.samagrasamachara.com/?p=71997 ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

]]>
71997
ಕೊಯನಾಡು: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ| ಇಬ್ಬರು ಸ್ಪಾಟ್ ಡೆತ್ https://sullia.samagrasamachara.com/2025/07/25/koyanadu-road-mishup-two-died/ Fri, 25 Jul 2025 08:32:36 +0000 https://sullia.samagrasamachara.com/?p=71307 ಸಂಪಾಜೆ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ‌ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡಿನಿಂದ ವರದಿಯಾಗಿದೆ.

ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿಗೆ ಮಡಿಕೇರಿಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.

ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ‌ ಎಂದು ತಿಳಿದುಬಂದಿದೆ. ಮೃತಪಟ್ಟವರ‌ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

]]>
71307
ಸಂಪಾಜೆ: ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಲಾರಿ https://sullia.samagrasamachara.com/2025/04/29/sampaje-fire-attack-to-larry/ Tue, 29 Apr 2025 04:59:03 +0000 https://sullia.samagrasamachara.com/?p=71127 ಸಮಗ್ರ ನ್ಯೂಸ್: ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತಿದ್ದ ಲಾರಿಯೊಂದು ಏಕಾಏಕಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ಕೊಯನಾಡು ಸಮೀಪ ಇಂದು(ಎ.29) ಮುಂಜಾನೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಮಡ್ ಬ್ಲಾಕ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಕೊಯನಾಡು ಸಮೀಪ ದಿಢೀರ್ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಇಳಿದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳದವರು , ಪೊಲೀಸರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

]]>
71127
ಸಂಪಾಜೆ: ಸ್ಕೂಟಿ ಮತ್ತು ಕಂಟೈನರ್ ನಡುವೆ ಭೀಕರ ಅಪಘಾತ| ಸವಾರರಿಬ್ಬರು ದಾರುಣ ಸಾವು https://sullia.samagrasamachara.com/2024/12/24/sampaje-accident-two-died/ Tue, 24 Dec 2024 12:24:56 +0000 https://sullia.samagrasamachara.com/?p=70608 ಸಂಪಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯ ಚೆಡಾವು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಡಿ.24ರ ಸಂಜೆ ಸಂಭವಿಸಿದೆ.

ಕಂಟೈನರ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಹಾಗೂ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಲ್ಲ ಮೂಲಗಳ ಪ್ರಕಾರ ಸಾವನ್ನಪ್ಪಿದ ಸವಾರನನ್ನು ಚಿದಾನಂದ ಆಚಾರ್ಯ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ಆತನ ಪತ್ನಿ ಎಂದು ಹೇಳಲಾಗಿದೆ.

]]>
70608
ಕಲ್ಲುಗುಂಡಿ: ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ‌ ಕಾರು https://sullia.samagrasamachara.com/2024/12/19/news-one-63/ Thu, 19 Dec 2024 03:44:15 +0000 https://sullia.samagrasamachara.com/?p=70594 ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಕಲ್ಲುಗುಂಡಿಯಲ್ಲಿ ಡಿ 19 ರಂದು ನಡೆದಿದೆ.

ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ KA -6-D9844 ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ರಸ್ತೆ ಬದಿಯ ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

]]>
70594
ಚೆಂಬು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ https://sullia.samagrasamachara.com/2024/11/22/news-one-39/ Fri, 22 Nov 2024 08:37:56 +0000 https://sullia.samagrasamachara.com/?p=70457 ಸಂಪಾಜೆ: ಮನೆಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳು ಹೊತ್ತಿ ಉರಿದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಉಂಬಳೆಯಲ್ಲಿ ಸಂಭವಿಸಿದೆ. ಚೆಂಬು ಗ್ರಾಮದ ಉಂಬಳೆ ಮಾನ್ಯ ಎಂ.ಟಿ. ಭಾಸ್ಕರರವರ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಮನೆಯಲ್ಲಿದ್ದ ಅಡಿಕೆ, ರಬ್ಬರ್ ಸಹಿತ ಕೃಷಿ ವಸ್ತಗಳು ಸಂಪೂರ್ಣ ಭಸ್ಮವಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ , ಸಂಪೂರ್ಣ ಮನೆಯೇ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ದಾಖಲೆಪತ್ರ, ಬಟ್ಟೆ ಬರೆ, ನಗದು ಹಣ, ಅಡಿಕೆ ಸೇರಿದಂತೆ ಅಲ್ಪಪ್ರಮಾಣದ ಚಿನ್ನಾಭರಣ ಬೆಂಕಿಗಾಹುತಿ ಆಗಿರುವುದಾಗಿ ತಿಳಿದುಬಂದಿದೆ.

]]>
70457
ಸಂಪಾಜೆ: ವಾಹನ ಡಿಕ್ಕಿ ಹೊಡೆದು ಚಿರತೆ ಸಾವು https://sullia.samagrasamachara.com/2024/11/21/news-one-37/ Thu, 21 Nov 2024 03:39:57 +0000 https://sullia.samagrasamachara.com/?p=70444 ಸಂಪಾಜೆ: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಚಿರತೆಯೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ತಡರಾತ್ರಿ ಸಂಭವಿಸಿದೆ.

ಕಾಡಿನಿಂದ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸದ್ಯ ಅರಣ್ಯ ಇಲಾಖೆಗೆ ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಬೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

]]>
70444
ಸಂಪಾಜೆ: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು| ಚಾಲಕ ಸೇರಿ ನಾಲ್ವರು ಗಂಭೀರ https://sullia.samagrasamachara.com/2024/11/13/news-one-34/ Wed, 13 Nov 2024 03:13:53 +0000 https://sullia.samagrasamachara.com/?p=70410 ಸಂಪಾಜೆ: ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ನ.13ರಂದು ಮುಂಜಾನೆ ಸಂಭವಿಸಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದಿದ್ದು, ಚಾಲಕ ಸೇರಿದಂತೆ ಮಂಗಳೂರು ಮೂಲದ ನಾಲ್ವರು ವ್ಯಕ್ತಿಗಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.

]]>
70410
ಸಂಪಾಜೆ: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯ ಜನನಾಂಗ ಹಿಡಿದೆಳೆದ ಸಹಪಾಠಿಗಳು| ಗಂಭೀರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಗೆ ದಾಖಲು https://sullia.samagrasamachara.com/2024/09/21/news-one-8/ Sat, 21 Sep 2024 08:54:59 +0000 https://sullia.samagrasamachara.com/?p=69989 ಸಂಪಾಜೆ: ಇಲ್ಲಿನ ಹಾಸ್ಟೆಲ್ ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಜನನಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಕಾರಣ ಏಟಾಗಿ ಊದಿಕೊಂಡಿದ್ದು ಬಾತುಕೊಂಡಿದ್ದು, ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ವರದಿಯಾಗಿದೆ.

ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷ ವಯಸ್ಸಿನ ಬಾಲಕ ಸಂಪಾಜೆಯ ಹಾಸ್ಟೆಲ್ ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಸೆ.14ರಂದು ರಾತ್ರಿ ಹಾಸ್ಟೆಲ್ ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಗುಪ್ತಾಂಗ ಹಿಡಿದೆಳೆದಿದ್ದರು. ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಮನೆಗೆ ಬಂದಿದ್ದನೆನ್ನಲಾಗಿದೆ.

ಮೊದಲು ಯಾರೊಡನೆಯೂ ಈ ವಿಚಾರ ಹಂಚಿಕೊಂಡಿರಲಿಲ್ಲ. ತೀವ್ರ ನೋವಿನ ಕಾರಣ ಮನೆಗೆ ತೆರಳಿದ್ದು ಈ ವೇಳೆ ಮನೆಯವರ ಗಮನಕ್ಕೆ ಬಂದಿದೆ. ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ತಿಳಿದುಬಂದಿದೆ.

ಅಲ್ಲಿ ಚಿಕಿತ್ಸೆ ನೀಡಿ ಶುಕ್ರವಾರ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪಾಜೆ ಪೋಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

]]>
69989
ಗೂನಡ್ಕ ಬಳಿ ಖಾಸಗಿ ಬಸ್ – ಓಮ್ನಿ ನಡುವೆ ಅಪಘಾತ| ಪ್ರಯಾಣಿಕರಿಗೆ ಗಾಯ https://sullia.samagrasamachara.com/2024/09/05/accident-near-goonadka-school/ Thu, 05 Sep 2024 02:58:45 +0000 https://sullia.samagrasamachara.com/?p=69836 ಅರಂತೋಡು: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗ್ರಾಮದ ಗೂನಡ್ಕದ ಶಾಲೆ ಬಳಿ ಖಾಸಗಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.

]]>
69836