Markanja – Sullia Samagra Samachara https://sullia.samagrasamachara.com Samagra Media Network Sat, 29 Nov 2025 16:23:47 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Markanja – Sullia Samagra Samachara https://sullia.samagrasamachara.com 32 32 235500897 ಮರ್ಕಂಜ: ಕುಡಿಯುವ ನೀರಿಗೆ ಮಲವಿಸರ್ಜಸಿ ಜಾತಿನಿಂದನೆ| ಆರೋಪಿಗೆ ಶಿಕ್ಷೆ ವಿಧಿಸಿದ ಕೋರ್ಟ್ https://sullia.samagrasamachara.com/2025/11/29/markanja-court-news/ Sat, 29 Nov 2025 16:23:47 +0000 https://sullia.samagrasamachara.com/?p=71687 ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಗುಂಡಿಮಜಲಿನ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಸಂಗ್ರಹಿಸಿಟ್ಟಿದ್ದ ಬ್ಯಾರಲ್‌ಗೆ ಮಲ ವಿಸರ್ಜಿಸಿದ ಸುಳ್ಯ ತಾಲ್ಲೂಕು ಕೆಮ್ರಾಜೆಯ ಗಿರೀಶ್‌ಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

7 ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ನೀರು ಮಲಿನ ಮಾಡಿದ ಹಾಗೂ ವಿಚಾರಿಸಿದ ಮಹಿಳೆ ಮತ್ತು ಗಂಡನನ್ನು ಬೈದು ಜಾತಿ ನಿಂದನೆ ಮಾಡಿದ ಗಿರೀಶ್‌ಗೆ ನ್ಯಾಯಾಲಯ ದಂಡವನ್ನೂ ವಿಧಿಸಿದೆ.

2017ನೇ ನ. 3ರಂದು ಘಟನೆ ನಡೆದಿತ್ತು. ಗಿರೀಶ್ ವಿರುದ್ಧ ಡಿವೈಎಸ್‌ಪಿ ಶ್ರೀನಿವಾಸ್ ಬಿ.ಎಸ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೂರುದಾರರ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಸರಿತಾ ಡಿ ಅವರು ಶಿಕ್ಷೆ ವಿಧಿಸಿದ್ದಾರೆ. ದೂರುದಾರರ ಪರವಾಗಿ ಜಯಂತಿ ಕೆ.ಭಟ್ ವಾದ ಮಂಡಿಸಿದ್ದರು.

]]>
71687
ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ಸೇವಾಜೆ ಬೆಳ್ಯಪ್ಪ ಗೌಡರ ತಲೆ ಬುರುಡೆ ಹಾಗೂ ಬಟ್ಟೆ ಪತ್ತೆ https://sullia.samagrasamachara.com/2024/12/06/news-one-57/ Fri, 06 Dec 2024 07:47:19 +0000 https://sullia.samagrasamachara.com/?p=70548 ಸಮಗ್ರ ನ್ಯೂಸ್: ಸೇವಾಜೆ ಎಂಬಲ್ಲಿ ಬಿದಿರಿನ ಹಿಂಡಲಿನಲ್ಲಿ ತಲೆಬುರುಡೆ ಮತ್ತು ಬಟ್ಟೆ ಕಾಣಸಿಕ್ಕಿದ್ದು, ಕೆಲ ತಿಂಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಸೇವಾಜೆಯ ಬೆಳ್ಯಪ್ಪ ಗೌಡ ಅವರ ತಲೆ ಬುರುಡೆ ಎಂದು ಹೇಳಲಾಗುತ್ತಿದೆ.

ಸೇವಾಜೆಯ ಬೆಳ್ಯಪ್ಪ ಗೌಡ (85 ವರ್ಷ) ಎಂಬವರು ಸೆ.9ರಂದು ಮನೆಯಿಂದ ಮಧ್ಯಾಹ್ನದ ವೇಳೆ ನಾಪತ್ತೆಯಾಗಿದ್ದರು.ಈ ಬಗ್ಗೆ ಎಲ್ಲ ಕಡೆ ಹುಡುಕಾಟ ನಡೆದಿದ್ದರೂ ನಿಗೂಢವಾಗಿ ಕಾಣೆಯಾದ ಬೆಳ್ಯಪ್ಪ ಅವರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು, ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಹಾಗೂ ಶೌರ್ಯ ವಿಪತ್ತು ದಳದ ಚಿದಾನಂದ ಮೂಡನಕಜೆ ಹಾಗೂ ಸ್ಥಳೀಯರು ಸೇರಿ ನಿರಂತರವಾದ ಹುಡುಕಾಟದಲ್ಲಿ ನಡೆಸಿದ್ದರು.

ಆದರೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಜ್ಯೋತಿಷ್ಯರ ಮೊರೆಯೂ ಹೋಗಿದ್ದರು. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಮಗ ಸುಬ್ರಹ್ಮಣ್ಯ ರವರು ನೀಡಿದ ದೂರು ಕೂಡ ದಾಖಲಾಗಿತ್ತು.ಇದೀಗ ಸುಬ್ರಹ್ಮಣ್ಯ ರ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಬಿದಿರ ಹಿಂಡಿಲಿನಲ್ಲಿ ತಲೆ ಬುರುಡೆ ಮತ್ತು ಬಟ್ಟೆ ದೊರೆತಿದ್ದು ಇದು ಬೆಳ್ಯಪ್ಪ ಗೌಡರದ್ದೆ ಆಗಿರಬಹುದು ಎಂದು ನಂಬಲಾಗಿದೆ. ಆದರೆ ಈ ಭಾಗದಲ್ಲಿ ಎಷ್ಟೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗದೇ, ಮೂರು ತಿಂಗಳ ಬಳಿಕ ಇದೇ ಭಾಗದಲ್ಲಿ ಪತ್ತೆಯಾಗಿರುವುದು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ.

]]>
70548
ಮರ್ಕಂಜ: ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಸಾವು https://sullia.samagrasamachara.com/2024/10/15/person-who-consumed-acid-died/ Tue, 15 Oct 2024 03:11:01 +0000 https://sullia.samagrasamachara.com/?p=70214 ಮರ್ಕಂಜ: ರಬ್ಬರ್‌ ಆ್ಯಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡು (70) ಅವರು ರವಿವಾರ ಮೃತಪಟ್ಟರು. ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್‌ ಆ್ಯಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

]]>
70214
ಮರ್ಕಂಜ: ಕಾಣೆಯಾಗಿದ್ದ ಮಹಿಳೆಯ ಶವ ಬಾವಿಯಲ್ಲಿ ಪತ್ತೆ https://sullia.samagrasamachara.com/2024/09/29/markanja-women-dead-body-found-in-the-well/ Sun, 29 Sep 2024 08:07:03 +0000 https://sullia.samagrasamachara.com/?p=70064 ಮರ್ಕಂಜ: ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಶನಿವಾರ (ಸೆ.28) ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಮಿತ್ತಡ್ಕದ ಮೋಹನ ಅವರ ಪತ್ನಿ ಶೋಭಾಲತಾ (35) ಅವರು ಸೆ. 24ರಂದು ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲು ಆರಂಭಿಸಲಾಗಿತ್ತು.

ಆರಂಭದಲ್ಲಿ ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಬಾವಿಯ ಒಳ ಭಾಗದಲ್ಲಿ ಮಣ್ಣು ಕುಸಿಯ ತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು ಹುಡುಕತೊಡಗಿದರು. ಕ್ಯಾಮರಾ ಇಳಿಸಿಯೂ ಶೋಧಿಸಲಾಯಿತು. ಆದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಮಹಿಳೆ ಬಾವಿಯಲ್ಲೇ ಇರುವ ಸಂಶಯ ದೃಢವಾದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರ ಸಹಕಾರದಿಂದ ತಹಸೀಲ್ದಾರರ ಸೂಚನೆಯಂತೆ ಬಾವಿಯನ್ನು ಒಂದು ಕಡೆಯಿಂದ ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕೆಲಸವನ್ನು ಶುಕ್ರವಾರ ಬೆಳಗ್ಗಿನಿಂದ ಆರಂಭಿಸಲಾಯಿತು. ಶನಿವಾರ ಮಣ್ಣು ತೆಗೆದ ಬಳಿಕ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದವರು ಬಾವಿಯೊಳಗೆ ಇಳಿದು ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.

]]>
70064
ಮರ್ಕಂಜ: ತಾ| ಮಟ್ಟದ ‌ದಸರಾ ಕ್ರೀಡಾಕೂಟ| ದೈಹಿಕ‌ ಆರೋಗ್ಯಕ್ಕೆ ಕ್ರೀಡೆ ಸಹಕಾರಿ – ಹರೀಶ್ ಕಂಜಿಪಿಲಿ https://sullia.samagrasamachara.com/2024/09/22/news-one-11/ Sun, 22 Sep 2024 14:04:18 +0000 https://sullia.samagrasamachara.com/?p=70001 ಮರ್ಕಂಜ.ಸೆ.22: ‘ಯುವಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಬೌದ್ಧಿಕವಾಗಿ ಹಾಗೂ ದೈಹಿಕ ಆರೋಗ್ಯವನ್ನು ಸದೃಢವಾಗಿರಿಸಲು ಸಹಕಾರಿಯಾಗುತ್ತದೆ‌. ಆದರೆ ಸಾಮಾಜಿಕ ಮಾಧ್ಯಮಗಳಿಂದ ಮೊಬೈಲ್ ಬಳಕೆಯತ್ತ ಹೆಚ್ಚು ಒಲವು ತೋರಿದ ಕಾರಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇದರಿಂದ ಆರೋಗ್ಯ ಹದಗೆಡುವ ಸಂದರ್ಭ ಬಂದಿದೆ‌‌. ಹೀಗಾಗಿ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು. ಅವರು ಸುಳ್ಯ ತಾಲೂಕು ದಸರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರೌಢಶಾಲೆ ಮರ್ಕಂಜ, ಗ್ರಾಮ ಪಂಚಾಯತ್ ಮರ್ಕಂಜ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳದ ವತಿಯಿಂದ ಸುಳ್ಯ ತಾಲೂಕು ದಸರಾ ಕ್ರೀಡಾ ಕೂಟ 2024-25 ಇಂದು ಮರ್ಕಂಜ ಪ್ರೌಢಶಾಲೆಯ ಮೈದಾನದಲ್ಲಿ‌ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮರ್ಕಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಸುಳ್ಯ ತಾಲೂಕು ಅಕ್ಷರ ದಾಸೋಹದ ಸಹಾಯಕ‌ ನಿರ್ದೇಶಕರಾದ ವೀಣಾ ಎಂ.ಟಿ. ವಹಿಸಿದ್ದರು. ‌

ವೇದಿಕೆಯಲ್ಲಿ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ ರೆಂಜಾಳ, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ದೇಲಂಪಾಡಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ, ಶ್ರೀ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಮರ್ಕಂಜ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾದ ಸುರೇಶ್ ಕಟ್ಟದಮೂಲೆ, ಮರ್ಕಂಜ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಕಾಂತ್ ಗುಳಿಗಮೂಲೆ, ಯುವಜನ ಸಂಯುಕ್ತ ಮಂಡಳಿ ಇದರ ಕಾರ್ಯದರ್ಶಿ ನಮಿತಾ ಹರ್ಲಡ್ಕ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಧನಂಜಯ ಎಂ. ಉಪಸ್ಥಿತರಿದ್ದರು. ‌

ಯುವ ಸಬಲೀಕರಣ ಕ್ರೀಡಾ ಇಲಾಖೆ ಇದರ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಸ್ವಾಗತಿಸಿದರು. ಮರ್ಕಂಜ ಪ್ರೌಢಶಾಲೆಯ ದೈಹಿಕ ಶಿಕ್ಷಕ ಹಾಗೂ ದಸರಾ ಕ್ರೀಡಾ ಕೂಟದ ಸಂಚಾಲಕ ಗಣೇಶ್ ವಂದಿಸಿದರು. ಬೆಳ್ಳಾಕೆ‌ ಕೆಪಿಎಸ್ ಬೆಳ್ಳಾರೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

]]>
70001
ಎಲಿಮಲೆ: ಗೌಡರ ಯುವ ಸೇವಾ ಸಂಘದ ವತಿಯಿಂದ ಸಹಾಯಧನ ವಿತರಣೆ https://sullia.samagrasamachara.com/2024/08/24/elimale-2/ Sat, 24 Aug 2024 02:57:55 +0000 https://sullia.samagrasamachara.com/?p=69697 ಎಲಿಮಲೆ: ಇತ್ತೀಚಿಗೆ ನಿಧನರಾದ ಎಲಿಮಲೆ ಸಮೀಪದ ಜಬಳೆ ನಿವಾಸಿ ನಿತ್ಯಾನಂದ ಹೊಸೊಳಿಕೆ, ಇವರ ಮನೆಯವರಿಗೆ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಆರ್ಥಿಕ ಸಹಾಯವನ್ನು ನೀಡಲಾಯಿತು.

ಗೌಡರ ಯುವ ಸೇವಾ ಸಂಘ ನಿರ್ದೇಶಕ ನವೀನ್ ಜಾಕೆ ಯವರು ನಿತ್ಯಾನಂದ ಅವರ ಪತ್ನಿ ಹೇಮ ಎನ್.ನಂದರವರಿಗೆ ಸಹಾಯಧನ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹೆಚ್.ಬಿ. ಕೇಶವ ಹೊಸೊಳಿಕೆ, ಜಯಂತ ಅಂಬೆಕಲ್ಲು ರಾಮಚಂದ್ರ ಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

]]>
69697