Kalmadka – Sullia Samagra Samachara https://sullia.samagrasamachara.com Samagra Media Network Tue, 17 Dec 2024 04:34:20 +0000 en-US hourly 1 https://wordpress.org/?v=6.9.4 https://sullia.samagrasamachara.com/wp-content/uploads/2024/07/cropped-logo-samagra-32x32.jpg Kalmadka – Sullia Samagra Samachara https://sullia.samagrasamachara.com 32 32 235500897 ಕಲ್ಮಕಾರು: ಅಯ್ಯಪ್ಪ‌ ವ್ರತಧಾರಿ ಮೇಲೆ ಕಾಡಾನೆ ದಾಳಿ https://sullia.samagrasamachara.com/2024/12/17/news-one-61/ Tue, 17 Dec 2024 04:34:20 +0000 https://sullia.samagrasamachara.com/?p=70586 ಕೊಲ್ಲಮೊಗ್ರು: ಇಲ್ಲಿನ ಸಮೀಪದ ಕಲ್ಮಕಾರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಯ್ಯಪ್ಪ ವ್ರತಧಾರಿ‌ ಗಂಭೀರವಾಗಿ ಗಾಯಗೊಂಡ‌ ಘಟನೆ ಡಿ. 17ರ ಮುಂಜಾನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಕಲ್ಮಕಾರು ಗ್ರಾಮದ ಚರಿತ್ ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ ಹೊಳೆಯಲ್ಲಿ ಬಟ್ಡೆ ತೊಳೆಯುತ್ತಿದ್ದಾಗ ಆನೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

ಅಯ್ಯಪ್ಪ ವೃತಧಾರಿ ಚರಿತ್ ಗೆ ಗಂಭೀರ ಗಾಯಗಳಾಗಿದ್ದು, ಸುಳ್ಯದ ಆಸ್ಪತ್ರೆಗೆ ದಾಖಲಾಗಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರು ದೌಡಾಯಿಸಿದ್ದಾರೆ.

]]>
70586
ಕಲ್ಮಡ್ಕ: ಸ್ವಿಪ್ಟ್ ಕಾರಿನಲ್ಲಿ ಅಕ್ರಮ ಗೋಸಾಗಾಟ| ಬೆಳ್ಳಾರೆ ಠಾಣೆ ಪೊಲೀಸರಿಂದ ದಾಳಿ https://sullia.samagrasamachara.com/2024/10/16/kalmadka/ Wed, 16 Oct 2024 07:52:32 +0000 https://sullia.samagrasamachara.com/?p=70235 ನಿಂತಿಕಲ್ಲು: ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಬೆಳ್ಳಾರೆ ಠಾಣಾ ಎಸೈ ಈರಯ್ಯ ಡಿ.ಎನ್‌. ಅವರ ನೇತೃತ್ವದಲ್ಲಿ ದಾಳಿ ನಡೆಸಲಾದ ಘಟನೆ ಕಲ್ಮಡ್ಕ ಎಂಬಲ್ಲಿ ಸೋಮವಾರ(ಅ.14) ರಾತ್ರಿ ನಡೆದಿದೆ.

ಪೊಲೀಸರು ದಾಳಿ ನಡೆಸುವ ವೇಳೆ ಸ್ವಿಪ್ಟ್ ಕಾರಿನಲ್ಲಿ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿರುವುದು ಕಂಡುಬಂದಿದೆ.

ಕಾರಿನ ಸಮೀಪದಲ್ಲೇ ತೆರೆದ ಕೊಟ್ಟಿಗೆಯಲ್ಲಿ 2 ಜಾನುವಾರುಗಳು ಕಂಡುಬಂದಿದ್ದು ಅದನ್ನು ಮೂವರು ವ್ಯಕ್ತಿಗಳು ಬಿಚ್ಚಲು ಯತ್ನಿಸುತ್ತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

]]>
70235